ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಪೂರ್ತಿ ಪಿಕ್ಚರ್‌ ತೋರಿಸುತ್ತೇನೆ: ಎಚ್‌ಡಿಕೆ

ಒಂದು ಸಾಲಿನಲ್ಲಿಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪಗಳನ್ನು ತಳ್ಳಿಹಾಕಿದ್ದು, ಸೋಮವಾರ ಎಲ್ಲವನ್ನೂ ಸಾಕ್ಷ್ಯ ಸಮೇತ ಬಹಿರಂಗಪಡಿಸುವುದಾಗಿ ಸವಾಲು ಹಾಕಿದ್ದಾರೆ.ಏನು? ಏಕೆ? ಹೇಗೆ?

ಎಚ್.ಡಿ. ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಏನು?

ತಮ್ಮನ್ನು ಯಾರು ಮುಟ್ಟಲು ಸಾಧ್ಯವಿಲ್ಲವೆಂದು ಹೇಳಿರುವ ಕುಮಾರಸ್ವಾಮಿ, ತನ್ನ ವಿರುದ್ಧದ ಆರೋಪಗಳಿಗೆ ಸೋಮವಾರ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ಹೇಳಿಕೆಯ ಬಗ್ಗೆ ಕುಮಾರಸ್ವಾಮಿ ಅವರ ಅಸಮಾಧಾನವೇನು?

ತನಿಖೆ ಮುಗಿಯುವ ಮುನ್ನವೇ ಪೊಲೀಸ್ ಕಮಿಷನರ್ ಹೇಳಿಕೆ ನೀಡಿರುವುದನ್ನು ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದು, ಅದನ್ನು ಅಸಂಬದ್ಧವೆಂದು ಕರೆದಿದ್ದಾರೆ.

ಸ್ಟಿಂಗ್ ಆಪರೇಷನ್ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಆರೋಪವೇನು?

ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಆಪ್ತರ ಕೈವಾಡವಿದೆ ಎಂದು ಪುರಾವೆಗಳ ಆಧಾರದಲ್ಲಿ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯೇನು?

ಈ ವಿವಾದದ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ, ಡಿ.ಕೆ. ಶಿವಕುಮಾರ್ ಕೂಡ ಈ ಬಗ್ಗೆ ಮೌನ ವಹಿಸಿದ್ದಾರೆ.

ಸರಕಾರದ ವಿರುದ್ಧ ಕುಮಾರಸ್ವಾಮಿ ಮಾಡಿರುವ ಆರೋಪವೇನು?

ಸರ್ಕಾರವು ತನ್ನ ಕುರ್ಚಿ ಉಳಿಸಿಕೊಳ್ಳಲು ಯಾರನ್ನು ಮೆಚ್ಚಿಸುತ್ತಿದೆ ಮತ್ತು ಸ್ಟಿಂಗ್ ವಿಡಿಯೋ ಮಾಡಿದವರನ್ನು ವಿದೇಶಕ್ಕೆ ಕಳುಹಿಸಿದ್ದು ಸೇರಿದಂತೆ ಹಲವು ವಿಷಯಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದಾರೆ.

&ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಬೆಂಗಳೂರು: ‘ಕುಮಾರಸ್ವಾಮಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನನ್ನನ್ನು ಅಷ್ಟು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ. ಪೂರ್ತಿ ಪಿಕ್ಚರ್‌ ನಾನು ತೋರಿಸುತ್ತೇನೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಸರ್ಕಾರ, ಸರ್ಕಾರದ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಯಾರಿಂದಲೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ನಾಳೆ (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಹೇಳಿದರು.

ಪ್ರಿಯಾಂಕ್‌ ಖರ್ಗೆ ಅವರು ‘ಪಿಕ್ಚರ್‌ ಅಬೀ ಬಾಕಿ ಹೆ’ ಎಂದಿದ್ದಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ನಾಳೆ ಬೆಳಿಗ್ಗೆ ಬನ್ನಿ. ಪೂರ್ತಿ ಪಿಕ್ಚರ್‌ ತೋರಿಸುತ್ತೇನೆ. ಇದೆಲ್ಲಾ ಯಾವ ಟ್ರೇಲರ್? ನಾನು ಸಿನಿಮಾ ಮಾಡಿರೋನು. ಇವರು ಈಗ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಸಿನಿಮಾ ಬಗ್ಗೆ ನಾಳೆ ನಾನು ವಿವರವಾಗಿ ಹೇಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಪೊಲೀಸ್‌ ಕಮಿಷನರ್ ಅವರೇ ಹೇಳಿಕೆ ನೀಡಿದ್ದಾರೆ ಎಂದಾಗ, ‘ಯಾರದು ಕಮಿಷನರ್‌? ಅವರು ಕಮಿಷನ್ನರಾ? ತನಿಖೆ ಮುಗಿಯುವ ಮುನ್ನವೇ ಹೇಗೆ ಹೇಳಿಕೆ ನೀಡಿದರು. ಇದನ್ನು ತನಿಖೆ ಎನ್ನುತ್ತಾರಾ? ಹೆಡ್‌ಕ್ಲರ್ಕ್‌ಗಿಂತಲೂ ಕಡೆಯಾಗಿ ಮಾತನಾಡಿದ್ದಾನೆ. ಅದು ಯಾವ ತಿರುಗುಬಾಣ ಮತ್ತು ಯಾರಿಗೆ ತಿರುಗುಬಾಣವಾಗಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯ ಸಮೇತ ವಿವರಿಸುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸ್ಟಿಂಗ್‘ಗೆ ಎಚ್‌ಡಿಕೆ ಮನೆ ಬಳಕೆ, ಆರೋಪಿಗಳಿಂದ ಮಾಹಿತಿ: ಸೀಮಾಂತ್ ಕುಮಾರ್

‘ಅವರು ಕುರ್ಚಿ ಉಳಿಸಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾರೆ, ಯಾರನ್ನು ಮೆಚ್ಚಿಸುತ್ತಿದ್ದಾರೆ, ಯಾರ ಮಾತನ್ನು ಕೇಳುತ್ತಿದ್ದಾರೆ ಎಂಬುದು ಎಲ್ಲವೂ ನನಗೆ ಗೊತ್ತಿದೆ. ಅದನ್ನೆಲ್ಲಾ ನಾಳೆ ಸುದ್ದಿಗೋಷ್ಠಿಯಲ್ಲಿ ತೆರೆದಿಡುತ್ತೇನೆ. ‘ಸ್ಟಿಂಗ್‌’ ವಿಡಿಯೊ ಮಾಡಿದವರನ್ನು ವಿದೇಶಕ್ಕೆ ಓಡಿಸಿದ್ದಾರೆ. ಮತ್ತೊಬ್ಬರು ಟಿ.ವಿಯಲ್ಲಿ ಕೂತು ಮಾತನಾಡುತ್ತಿದ್ದಾರೆ. ಅದನ್ನು ಹೊರಹಾಕಲೆಂದು ವಿಡಿಯೊ ಅಪ್‌ಲೋಡ್‌ ಮಾಡಿದವರ ಹಿಂದೆ ಬಿದ್ದಿದ್ದಾರೆ. ಏನು ಮಾಡುತ್ತಾರೋ ನೋಡೇಬಿಡುತ್ತೇನೆ’ ಎಂದು ಸವಾಲು ಹಾಕಿದರು.

‘ಈ ಸರ್ಕಾರ ಯಾರನ್ನೆಲ್ಲಾ ರಕ್ಷಣೆ ಮಾಡುತ್ತಿದೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಅವರು ಯಾಕೆ ತಡೆಯಾಜ್ಞೆ ತಗೊಂಡಿದ್ದಾರೆ? ಯತೀಂದ್ರ ಸಿದ್ದರಾಮಯ್ಯ ತಮ್ಮ ಪಕ್ಷದವರೇ ಸ್ಟಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂಬುದೂ ಗೊತ್ತಿದೆ. ನಾಳೆ ಎಲ್ಲವನ್ನೂ ತಿಳಿಸುತ್ತೇನೆ’ ಎಂದರು.

– ಪ್ರಿಯಾಂಕ್ ಖರ್ಗೆ, ಗೃಹ ಸಚಿವಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಆಪ್ತರ ಕೈವಾಡವಿದೆ. ನಾನು ನಿಖರ ಪುರಾವೆಗಳ ಆಧಾರದಲ್ಲಿ ಇದನ್ನು ಹೇಳುತ್ತಿದ್ದೇನೆ.ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್‌ ಕಾರ್ಯಾ ಚರಣೆಯ ವಿಡಿಯೊ ಕುಮಾರಸ್ವಾಮಿಯ ದೆಹಲಿ ನಿವಾಸದಲ್ಲಿ ಹಸ್ತಾಂತರವಾಗಿರುವುದಾಗಿ ಪೊಲೀಸ್ ಕಮಿಷನರ್‌ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿರಾಕರಿಸಿದರು. ಈ ಬಗ್ಗೆ ಸುದ್ದಿಗಾರರು ಭಾನುವಾರ ಪ್ರಶ್ನಿಸುತ್ತಿದ್ದಂತೆ, ಎರಡೂ ಕೈ ಮುಗಿದು ಮೌನವಾಗಿ ತೆರಳಿದರು.ಪ್ರತಿಕ್ರಿಯಿಸಲು ನಿರಾಕರಿಸಿದ ಸಿ.ಎಂ.