ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ವಾರದ ನಾಮಿನೇಶನ್ ಪ್ರಕ್ರಿಯೆ ಆರಂಭವಾಗಿದ್ದು, ಮನೆಯ ಸದಸ್ಯರ ನಡುವೆ ವಾಕ್ಸಮರ ತೀವ್ರಗೊಂಡಿದೆ. ಅರ್ಹತೆ ಇಲ್ಲದ ಸ್ಪರ್ಧಿಗಳ ಭಾವಚಿತ್ರಕ್ಕೆ ಕೊಡಲಿಯನ್ನು ಚುಚ್ಚಿ ನಾಮಿನೇಟ್ ಮಾಡುವ ವಿಶೇಷ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳ ನಡುವಿನ ಹಳೆಯ ಅಸಮಾಧಾನಗಳು ಬೀದಿಗೆ ಬಂದಿವೆ. ನಾಮಿನೇಶನ್ ವೇಳೆ ಗಾನವಿ ಅವರು ಆಸಿಯಾ ಅವರ ಭಾವಚಿತ್ರಕ್ಕೆ ಕೊಡಲಿ ಚುಚ್ಚಿ ತಮ್ಮ ನಿರ್ಧಾರವನ್ನು ತಿಳಿಸಿದರು. ಆಸಿಯಾ ಅವರ ಆಟ ಮತ್ತು ಕೊಡುಗೆ ಈ ಮನೆಯಲ್ಲಿ ತುಂಬಾ ಕಮ್ಮಿ ಇದೆ ಎಂದು ಗಾನವಿ ಬಹಿರಂಗವಾಗಿಯೇ ಆರೋಪಿಸಿದರು. ಈ ಹೇಳಿಕೆಯು ಆಸಿಯಾ ಅವರನ್ನು ತೀವ್ರ ಕೋಪಕ್ಕೆ ದೂಡಿತು.

ಗಾನವಿ ಅವರ ಆರೋಪಕ್ಕೆ ತಕ್ಷಣವೇ ತಿರುಗೇಟು ನೀಡಿದ ಆಸಿಯಾ, ‘ನಾನು ಆಡಿರುವಷ್ಟು ಟಾಸ್ಕ್ ಅನ್ನು ನೀನು ಆಡಿಯೇ ಇಲ್ಲ, ಹೋಗೆ ಅಲ್ಲಿಗೆ’ ಎಂದು ಏಕವಚನದಲ್ಲೇ ಕಿಡಿಕಾರಿದರು. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾತಾವರಣ ಮತ್ತಷ್ಟು ಕಾವೇರಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.