ಚಿಕ್ಕಮಗಳೂರು, ನವೆಂಬರ್​​ 29: ರಾಗಿಯಲ್ಲಿ ಕಲ್ಲು, ಮಣ್ಣು ಮಿಶ್ರಣ ಮಾಡ್ತಿದ್ದ ಘಟಕದ ಮೇಲೆ ದಾಳಿ ಆಹಾರ ನಿಗಮದ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಳ್ಳಿ ಬಳಿ ನಡೆದಿದೆ. ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅನುರಾಧ ನೇತೃತ್ವದಲ್ಲಿ ಲಿಂಗದಳ್ಳಿ ಬಳಿಯ ವೇರ್​​ಹೌಸ್ ಮೇಲೆ ರೇಡ್​​ ನಡೆಸಲಾಗಿದ್ದು, ಆರೋಪಿಗಳು ಹಣದ ಆಸೆ ಪಡಿತರದಾರರಿಗೆ ನೀಡುವ ರಾಗಿ ಕಲಬೆರಕೆ ಮಾಡುತ್ತಿರುವುದು ಕಂಡುಬಂದಿದೆ. ದಾಳಿ ವೇಳೆ ರಾಗಿಯಲ್ಲಿ ಮರಳು ಬೆರಸುತ್ತಿದ್ದ ತಂಡ ಲಾಕ್​​​ ಆಗಿದ್ದು, ಮರಳು ಮತ್ತು ಕಲ್ಲು ತುಂಬಿದ ಲಾರಿಯನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ವೇರ್​​ಹೌಸ್ ಮ್ಯಾನೇಜರ್​ ಲೋಕೇಶ್ ವಿರುದ್ಧ ಲಿಂಗದಳ್ಳಿ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ. ಬೇರೆ ಜಿಲ್ಲೆಗಳಿಂದ ರಾಗಿ ಖರೀದಿಸಿ ವೇರ್​ಹೌಸ್​ನಲ್ಲಿ ಸಂಗ್ರಹಿಸುತ್ತಿದೆ ರಾಗಿಗೆ ಬಿಹಾರದ ಕಾರ್ಮಿಕರಿಂದ ಮರಳು ಮಿಶ್ರಣ ಮಾಡಿಸಲಾಗುತ್ತಿತ್ತು. ಬಳಿಕ ವೇರ್​ಹೌಸ್​ಯಿಂದ ರಾಜ್ಯದ ವಿವಿಧ ಸೊಸೈಟಿಗಳು, ನ್ಯಾಯಬೆಲೆ ಅಂಗಡಿಗಳಿಗೆ ಇದನ್ನು ಗ್ಯಾಂಗ್​​ ಸರಬರಾಜು ಮಾಡುತ್ತಿತ್ತು ಎಂಬುದು ಗೊತ್ತಾಗಿದೆ. ಘಟನೆ ಸಂಬಂಧ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.