‘ದಾದಾ ಆನ್ ಹಾಲಿಡೇ’ ಟೈಟಲ್ ಲಾಂಚ್ ವೇಳೆ ನಟ ಕಿಚ್ಚ ಸುದೀಪ್ ಅವರನ್ನು ನೋಡಲು ಬೆಂಗಳೂರಿನ ಓರಿಯನ್ ಮಾಲ್ನಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ ಸುದೀಪ್ ಅವರ ದರ್ಶನ ಸಿಗದೆ ಅಭಿಮಾನಿಗಳು ನಿರಾಸೆಯಿಂದ ಮರಳಿದ್ದರು. ಈ ಬಗ್ಗೆ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದರು. ಇದೀಗ ಸ್ವತಃ ಕಿಚ್ಚ ಸುದೀಪ್ ಅವರು ಈ ಪತ್ರಕ್ಕೆ ಪ್ರತಿಕ್ರಿಯಿಸಿ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಅಭಿಮಾನಿಯ ಪತ್ರದಲ್ಲಿ ಏನಿತ್ತು?
‘ಸುದೀಪ್ ಅವರನ್ನು ಒಂದು ಸೆಕೆಂಡ್ ನೋಡಲು ಸಂಜೆ 5 ಗಂಟೆಯಿಂದಲೇ ಅಭಿಮಾನಿಗಳು ಕಾಯುತ್ತಿದ್ದರು. ದೂರದ ಊರುಗಳಿಂದ ಬಂದಿದ್ದ ಅಭಿಮಾನಿಗಳು ಗಂಟೆಗಟ್ಟಲೆ ಕಾದು ಕೊನೆಗೆ ನಿರಾಸೆಯಿಂದ ವಾಪಸ್ ಹೋಗಿದ್ದಾರೆ. ನಮಗೆ ನಿಮ್ಮ ಬಳಿ ಮಾತನಾಡಬೇಕು ಅಥವಾ ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಇರಲಿಲ್ಲ. ಕೇವಲ ಒಂದು ಕ್ಷಣ ನಿಮ್ಮ ದರ್ಶನವಾದರೆ ಸಾಕಿತ್ತು. ಸಾವಿರಾರು ಅಭಿಮಾನಿಗಳ ಕಾಯುವಿಕೆಗೆ ಒಂದು ಸೆಕೆಂಡ್ ದರ್ಶನವೂ ಸಿಗಲಿಲ್ಲ ಎಂದರೆ ನೋವಾಗುವುದು ಸಹಜ ಸರ್’ ಎಂದು ಅಭಿಮಾನಿ ನೋವು ತೋಡಿಕೊಂಡಿದ್ದರು. ಪದೇ ಪದೇ ಹೀಗೆ ನಿರಾಸೆಯಾದರೆ ವರ್ಷಗಳಿಂದ ಕಟ್ಟಿಕೊಂಡ ಅಭಿಮಾನದ ಬಂಧ ಸಡಿಲವಾಗಬಹುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿತ್ತು.
ಸುದೀಪ್ ನೀಡಿದ ಸ್ಪಷ್ಟನೆ ಏನು?
ಅಭಿಮಾನಿಯ ಈ ಪತ್ರಕ್ಕೆ ಸುದೀಪ್ ಅವರು ಪ್ರೀತಿಯಿಂದಲೇ ಉತ್ತರಿಸಿದ್ದಾರೆ. ‘ನಿಮ್ಮ ಭಾವನೆಗಳನ್ನು ಪದಗಳಲ್ಲಿ ಬರೆದಿರುವುದು ತುಂಬಾ ಚೆನ್ನಾಗಿದೆ. ಆದರೆ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ನನಗೂ ಮನಸ್ಸಿಗೆ ತುಂಬಾ ಬೇಸರವಾಗಿದೆ. ಸಂಜೆ 6:30ಕ್ಕೆ ಕಾರ್ಯಕ್ರಮ ಆರಂಭವಾಗಿ 7:30ಕ್ಕೆ ಮುಗಿಸಿ ಹೊರಬರುವ ಯೋಜನೆ ಇತ್ತು. ನಾನು ಕಾರ್ಯಕ್ರಮ ಮುಗಿದ ತಕ್ಷಣ ಅಭಿಮಾನಿಗಳು ಸೇರಿದ್ದ ಮುಖ್ಯ ಹಾಲ್ಗೆ ಬಂದೆ. ಆದರೆ ಅಲ್ಲಿ ಯಾರೂ ಇರಲಿಲ್ಲ’ ಎಂದು ಅವರು ವಿವರಿಸಿದ್ದಾರೆ.
Very sweet of you to have penned ur feelings and I truely and whole heartedly feel bad for not being able to interact with you all.
The truth: Launch was to happen by 6.30pm.. and i was to walk out by 7.30pm odd.. see you all,, speak few words and leave the venue, and tats exactly is wat I did. The 1st thing I did post the event was to walk out to the main hall where u all had gathered. I was surprised to know everyone were vacated as a protocol towards CM’s arriving. And i had no clue tat this has happend when i was inside the theater. It surely was Heart breaking.
There is no way I would come to Orion and leave without meeting my dear ones. Nothing is more exciting than hearing the crowd and the love you all showcase through that roar.I was genuinely happy to know the huge gathering for my sake, and I have no words to express my gratitude. Thank u
Apologies …… as this went outta my hands and control.
All I can say is,,
I luv you all, i have never let you all down,, i shall never let u all down.Luv & Hugs
K— Kichcha Sudeepa (@KicchaSudeep) November 28, 2026
ವಿಳಂಬವಾಯಿತು..
ಅಲ್ಲಿ ಸೇರಿದ್ದ ಅಭಿಮಾನಿಗಳನ್ನು ಏಕೆ ಕಳುಹಿಸಲಾಯಿತು ಎಂಬುದು ನನಗೆ ನಂತರ ತಿಳಿಯಿತು. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ಶಿಷ್ಟಾಚಾರದ ಕಾರಣಕ್ಕೆ ಪೊಲೀಸರು ಎಲ್ಲರನ್ನೂ ಅಲ್ಲಿಂದ ತೆರವುಗೊಳಿಸಿದ್ದರು. ನಾನು ಥಿಯೇಟರ್ ಒಳಗಿದ್ದ ಕಾರಣ ನನಗೆ ಈ ವಿಷಯ ಗೊತ್ತೇ ಇರಲಿಲ್ಲ. ಇದು ನನ್ನ ಹೃದಯಕ್ಕೆ ತುಂಬಾ ನೋವು ತಂದಿತು’ ಎಂದು ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ಕಿಚ್ಚ
‘ನನ್ನ ಪ್ರೀತಿಯ ಅಭಿಮಾನಿಗಳನ್ನು ಭೇಟಿಯಾಗದೆ ನಾನು ಓರಿಯನ್ ಮಾಲ್ನಿಂದ ಹೊರಹೋಗಲು ಸಾಧ್ಯವೇ ಇಲ್ಲ. ನಿಮ್ಮ ಘೋಷಣೆ ಮತ್ತು ಪ್ರೀತಿಗಿಂತ ದೊಡ್ಡ ಖುಷಿ ನನಗೆ ಬೇರೊಂದಿಲ್ಲ. ನನ್ನ ಸಲುವಾಗಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನೀವು ಸೇರಿದ್ದೀರಿ ಎಂದು ತಿಳಿದು ತುಂಬಾ ಸಂತೋಷವಾಯಿತು. ಆದರೆ ಪರಿಸ್ಥಿತಿ ನನ್ನ ಕೈಮೀರಿ ಹೋಗಿದ್ದರಿಂದ ನಿಮ್ಮನ್ನು ಭೇಟಿಯಾಗಲು ಆಗಲಿಲ್ಲ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಎಂದಿಗೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ’ ಎಂದು ಸುದೀಪ್ ಭರವಸೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



