ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿ ತಾಂಡವ್ ರಾಮ್ ಅವರು ತಮ್ಮ ಅದ್ಭುತ ನೃತ್ಯ ಪ್ರದರ್ಶನದ ಮೂಲಕ ಮನೆಯ ಸದಸ್ಯರನ್ನು ಮತ್ತು ವೀಕ್ಷಕರನ್ನು ರಂಜಿಸಿದ್ದಾರೆ. ವೀಕೆಂಡ್ ಕಾರ್ಯದಲ್ಲಿ, ಸ್ಪರ್ಧಿಗಳು ಕೆಲವು ಸಂಕೇತಗಳನ್ನು ಆಧರಿಸಿ ಹಾಡನ್ನು ಗುರುತಿಸುವ ಆಟವಾಡಿದರು. ಆಟದ ಭಾಗವಾಗಿ, ‘ಅನಿಸುತಿದೆ ಯಾಕೋ ಇಂದು’ ಹಾಡನ್ನು ಕಂಡುಹಿಡಿದ ನಂತರ, ಸುದೀಪ್ ತಾಂಡವ್‌ಗೆ ನೃತ್ಯ ಮಾಡುವಂತೆ ಸವಾಲು ಹಾಕಿದರು.

ತಾಂಡವ್ ಈ ಸವಾಲನ್ನು ಸ್ವೀಕರಿಸಿ, ಕ್ರೇಜಿಸ್ಟಾರ್ ಎಂದೇ ಖ್ಯಾತಿ ಪಡೆದಿರುವ ರವಿಚಂದ್ರನ್ ಅವರ ವಿಶಿಷ್ಟ ಶೈಲಿಯಲ್ಲಿ ನೃತ್ಯ ಮಾಡಲು ಮುಂದಾದರು. ಆಗ ತಾಂಡವ್, ನೀವು ಕ್ರೇಜಿಸ್ಟಾರ್ ಶೈಲಿಯಲ್ಲಿ ನೃತ್ಯ ಮಾಡುವಂತೆ ಕೇಳಿದರೆ, ನಾನು ಬೇಡ ಎಂದು ಹೇಳುತ್ತೇನೆಯೇ ಸರ್?’ ಎಂದು ಕೇಳಿದರು. ತಾಂಡವ್ ಅವರ ಈ ಸಿದ್ಧತೆ ಮತ್ತು ಉತ್ಸಾಹ ಮನೆಯ ಸದಸ್ಯರಲ್ಲಿ ಕುತೂಹಲ ಮೂಡಿಸಿತು.

ತಾಂಡವ್ ತಮ್ಮ ವಿಶಿಷ್ಟ ಶೈಲಿಯ ನೃತ್ಯ ಪ್ರದರ್ಶನವನ್ನು ಆರಂಭಿಸುತ್ತಿದ್ದಂತೆಯೇ, ಗಾನವಿ ಸಂಪೂರ್ಣವಾಗಿ ಆಘಾತಕ್ಕೊಳಗಾದರು. ‘ನಾನು ಮೊದಲ ಬಾರಿಗೆ ಗಾನವಿ ರಿವರ್ಸ್ ಗೇರ್‌ನಲ್ಲಿ ನೋಡುತ್ತಿದ್ದೇನೆ’ ಎಂದು ಸುದೀಪ್ ಹೇಳಿದರು

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.