ಬೆಂಗಳೂರು, ನವೆಂಬರ್​​ 15: ಬೆಂಗಳೂರು ಸೇರಿ ರಾಜ್ಯದ 15 ಜಿಲ್ಲೆಗಳ 345 ಪರೀಕ್ಷಾ ಕೇಂದ್ರಗಳಲ್ಲಿ ಇಂದು (ನವೆಂಬರ್​​ 15) KPSCಯಿಂದ 319 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಎಕ್ಸಾಂ ನಡೆಯಲಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4ರವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ. ಕೆಎಎಸ್​​ ಪೂರ್ವಭಾವಿ ಪರೀಕ್ಷೆಗೆ 1.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಎಲ್ಲೆಲ್ಲಿ ಪರೀಕ್ಷಾ ಕೇಂದ್ರಗಳು?

ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಧಾರವಾಡ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಹಾಸನ, ದಾವಣಗೆರೆ ಮತ್ತು ತುಮಕೂರಿನಲ್ಲಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಎಕ್ಸಾಂ ನಡೆಯಲಿದೆ.

ಇದನ್ನೂ ಓದಿ: ಕೆಎಎಸ್ ಪರೀಕ್ಷೆ ಸಿದ್ಧತೆ, ಭದ್ರತೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಸಭೆ: ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಿಟ್ಟಾಗಿ ಎಕ್ಸಾಂ ನಡೆಸುವಂತೆ ಸೂಚನೆ

ಅಕ್ರಮ ತಡೆಗೆ ಏನೆಲ್ಲ ಕಠಿಣ ಕ್ರಮ?

  • ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು, ಬಿಗಿ ಪೊಲೀಸ್ ಭದ್ರತೆ
  • ಇದೇ ಮೊದಲ ಬಾರಿಗೆ 3 ಪ್ರತಿ OMR ಪದ್ಧತಿ ಜಾರಿ
  • ಪರೀಕ್ಷಾ ಕೇಂದ್ರಗಳಲ್ಲಿ ವಸ್ತ್ರ ಸಂಹಿತೆ ನಿಯಮ ಕಡ್ಡಾಯ ಜಾರಿ
  • ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳಿಗೆ ಮಾತ್ರ ಎಕ್ಸಾಂ ಬರೆಯಲು ಅವಕಾಶ
  • ಒಂದು ಕೊಠಡಿಗೆ ಇಬ್ಬರು ಪರೀಕ್ಷಾ ಮೇಲ್ವಿಚಾರಕರ ನೇಮಕ
  • ಒಎಂಆರ್ ಶೀಟ್‌ನಲ್ಲಿ ಐದನೇ ವೃತ್ತದ ಹೊಸ ಪ್ರಯೋಗ
  • ಪರೀಕ್ಷಾ ಕೊಠಡಿಗೆ ಮೊಬೈಲ್ ಫೋನ್ ಸಂಪೂರ್ಣ ನಿಷೇಧ
  • ಸ್ಮಾರ್ಟ್‌ವಾಚ್, ಬ್ಲೂಟೂತ್, ಪೆನ್‌ಡ್ರೈವ್ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳಿಗಿಲ್ಲ ಅವಕಾಶ
  • ಪರೀಕ್ಷೆ ಮುಗಿದ ತಕ್ಷಣ ಒಎಂಆರ್ ಪ್ರತಿ ಸ್ಕ್ಯಾನಿಂಗ್ ಮಾಡಿ ವೆಬ್‌ಸೈಟ್​​ಗೆ ಅಪ್‌ಲೋಡ್​​

ಹೈಟೆಕ್ ಕಾಪಿ ತಡೆಯಲು ಇ​ಎನ್​ಟಿ ವೈದ್ಯರ ನಿಯೋಜನೆ

ಬ್ಲೂಟೂತ್​, ಮೈಕ್ರೋ ಇಯರ್​ ಪೋನ್​​ ಸೇರಿದಂತೆ ಇತರೆ ವಸ್ತು ಕಿವಿಯೊಳಗೆ ಇಡೋದನ್ನು ತಡೆಯಲು ಹೈಟೆಕ್ ಕಾಪಿ ತಡೆಯಲು ಒಟ್ಟು 13 ಸೂಕ್ಷ್ಮ ಕೇಂದ್ರಗಳಲ್ಲಿ ಇ​ಎನ್​ಟಿ ವೈದ್ಯರ ನಿಯೋಜನೆ ಮಾಡಲಾಗಿದೆ. ರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ನಿಷೇಧಾಜ್ಞೆ ವಿಧಿಸಲಾಗಿದ್ದು, 1 ಕಿ.ಮೀ. ವ್ಯಾಪ್ತಿಯಲ್ಲಿ ಜೆರಾಕ್ಸ್, ಸೈಬರ್ ಸೆಂಟರ್ ಬಂದ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆಯೂ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಕಟ್ಟುನಿಟ್ಟಿನ ಸೂಚನೆ ನೀಡಿರುವ ಸಿಎಂ

ಚುನಾವಣೆ ಮಾದರಿಯಲ್ಲಿ ಕಟ್ಟುನಿಟ್ಟಿಟ್ಟಾಗಿ KPSC ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಅದಾಗಲೇ ಖಡಕ್​​ ಸೂಚನೆ ನೀಡಿದ್ದಾರೆ. ಕೆಎಎಸ್ ಪರೀಕ್ಷೆ ಸಿದ್ಧತೆ, ಭದ್ರತೆ ಬಗ್ಗೆ ಗೃಹಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್​​ ಮೂಲಕ ಸಭೆ ನಡೆಸಿದ್ದ ಅವರು, ಪಾರದರ್ಶಕವಾಗಿ ಮತ್ತು ಅಕ್ರಮ ರಹಿತ ಪರೀಕ್ಷೆ ನಡೆಸಲು ಸಿದ್ಧತೆಗೆ ನಿರ್ದೇಶನ ನೀಡಿದ್ದರು. ಪರೀಕ್ಷಾ ಕೇಂದ್ರದ ಆವರಣದಲ್ಲಿ ಯಾವುದೇ ಅನಧಿಕೃತ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ನೀಡಬೇಡಿ, ಪ್ರವೇಶಕ್ಕೆ ಅನುಮತಿ ಇರುವ ವ್ಯಕ್ತಿಯೂ ಭದ್ರತಾ ತಪಾಸಣೆಗೆ ಒಳಪಡಬೇಕು ಎಂದು ಸೂಚಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.