ಅಮೃತಧಾರೆ ಸೀರಿಯಲ್ನ ಖಡಕ್ ವಿಲನ್ ಜೈದೇವ್ ಅಂತ್ಯ ಹೇಗೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಇಷ್ಟು ದಿನ ಅಣ್ಣ ಗೌತಮ್ ಮತ್ತು ಪೊಲೀಸರಿಂದಲೂ ಜೈದೇವ್ ತಪ್ಪಿಸಿಕೊಳ್ಳುತ್ತಿದ್ದನು. ಇದೀಗ ಎಲ್ಲಾ ಕಡೆಯಿಂದಲೂ ಜೈದೇವ್ ಲಾಕ್ ಆಗಿದ್ದಾನೆ.
ದೀಪಿಕಾಳನ್ನು ಕಿಡ್ನ್ಯಾಪ್ ಮಾಡಿ ಆಕೆಯಿಂದ ಆಸ್ತಿಪತ್ರಕ್ಕೆ ಸಹಿ ಮಾಡಿಸಿಕೊಳ್ಳಲು ಜೈದೇವ್ ಮತ್ತು ಶಕುಂತಲಾ ಪ್ಲಾನ್ ಮಾಡಿದ್ದರು. ಆದ್ರೆ ಈ ವೇಳೆ ಅಲ್ಲಿಗೆ ಬಂದ ಭೂಮಿಕಾ, ದೀಪಿಕಾಗೆ ನಾವಿಬ್ಬರೂ ಒಂದೇ ತಾಯಿಯ ಮಕ್ಕಳು ಎಂಬ ಸತ್ಯ ಹೇಳಿದ್ದಳು. ಈ ವಿಷಯ ಕೇಳಿ ಶಕುಂತಲಾ ಮತ್ತು ಜೈದೇವ್ ಶಾಕ್ ಆಗಿದ್ದರು. ಆದ್ರೂ ಭೂಮಿಕಾ-ದೀಪಿಕಾಗೆ ಗನ್ ತೋರಿಸಿ ಆಸ್ತಿಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದನು.
ಅಷ್ಟರಲ್ಲಿ ಅಲ್ಲಿಗೆ ಗೌತಮ್ ಬಂದು, ತಾಯಿ ಶಕುಂತಲಾ ವಿರುದ್ಧ ತನ್ನ ಅಸಮಾಧಾನ ಹೊರ ಹಾಕಿದ್ದಾನೆ. ಬದಲಾವಣೆ ಜಗದ ನಿಯಮ ಎಂದು ನಿನ್ನನ್ನು ಕ್ಷಮಿಸಿ ಮನೆಗೆ ಸೇರಿಸಿಕೊಂಡೆ ಎಂದು ಶಕುಂತಲಾ ಮೋಸವನ್ನು ನೆನೆದು ಗೌತಮ್ ಕಣ್ಣೀರು ಹಾಕಿದ್ದಾನೆ. ತಂದೆ ಹೇಳಿದ ಎಲ್ಲಾ ಜವಾಬ್ದಾರಿ ನಿರ್ವಹಿಸಿದೆ. ಆದ್ರೆ ಒಬ್ಬ ತಮ್ಮನನ್ನು ಸರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಗೌತಮ್ ಭಾವುಕನಾಗಿದ್ದಾನೆ.
ಗೌತಮ್ ಅಷ್ಟೆಲ್ಲಾ ಬುದ್ದಿಮಾತು ಹೇಳಿದರೂ ಜೈದೇವ್ ಮಾತ್ರ ಬದಲಾಗದೇ ಅಹಂಕಾರದ ಮಾತುಗಳನ್ನಾಡಿದ್ದಾರೆ. ಅಂತಿಮವಾಗಿ ಜೈದೇವ್ನನ್ನು ಬಂಧಿಸಲು ಮಲ್ಲಿ ಪೊಲೀಸರೊಂದಿಗೆ ಆಗಮಿಸಿದ್ದಾಳೆ. ಮಲ್ಲಿ ಬರುತ್ತಿದ್ದಂತೆ ಜೈದೇವ್ ಮತ್ತೆ ಹೊಸ ನಾಟಕ ಆರಂಭಿಸಿದ್ದಾನೆ. ನಾನು ಮಾತ್ರ ಜೈಲು ಸೇರಲ್ಲ ಹಾಗೂ ನನ್ನ ಶತ್ರುಗಳನ್ನು ಉಳಿಸಲ್ಲ ಎಂದು ಗನ್ ಹಿಡಿದುಕೊಂಡು ನಿಂತಿದ್ದಾನೆ.
ಗನ್ ಹಿಡಿದಿರೋದನ್ನು ಮಾತ್ರ ಪ್ರೋಮೋದಲ್ಲಿ ತೋರಿಸಲಾಗಿದೆ. ಪ್ರೋಮೋ ನೋಡಿರುವ ವೀಕ್ಷಕರು, ಜೈದೇವ್ ತಾನೇ ಶೂಟ್ ಮಾಡಿಕೊಳ್ಳುವ ಅಂತ್ಯ ಕಾಣಬಹುದು ಅಥವಾ ಮಲ್ಲ ಅಥವಾ ಬೇರೆ ಪೊಲೀಸರ ಗುಂಡೇಟಿನಿಂದ ಸಾಯಬಹುದು ಎಂದು ಅಂದಾಜಿಸುತ್ತಿದ್ದಾರೆ. ಇಂದು ಸಂಜೆ 6.30ಕ್ಕೆ ಪ್ರಸಾರವಾಗಿ 7.30ವರೆಗೆ ಅಮೃತಧಾರೆಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ.

