ಶಿವಶಂಕರಪ್ಪ ಸಾಹುಕಾರ ಅವರ ಕಡೆಯ ಅಭ್ಯರ್ಥಿಗಳಿಗೆ ನೀಡಿದ್ದ ಕೀ ಉತ್ತರಗಳು ತಪ್ಪಾಗಿದ್ದವು. ಅದನ್ನು ಸರಿಪಡಿಸುವ ಉದ್ದೇಶದಿಂದ ಗೀತಾ ಅವರು, ಆ ಅಭ್ಯರ್ಥಿಗಳ ಕ್ರಮಸಂಖ್ಯೆಯನ್ನು ಗಂಗ್ವಾರ್‌ಗೆ ನೀಡಿದ್ದರು. ತಾವು ನೀಡಿದ್ದ ಕೀ ಉತ್ತರಗಳಿಗೆ ಸರಿಹೊಂದುವ ಪ್ರಶ್ನೆಪತ್ರಿಕೆ ಬರುವ ರೀತಿಯಲ್ಲಿ ಗಂಗ್ವಾರ್‌ ಅವರು ಪರೀಕ್ಷಾ ಕೊಠಡಿಯಲ್ಲಿ ಆ ಅಭ್ಯರ್ಥಿಗಳ ಜಾಗಗಳನ್ನು ಬದಲಿಸಿದ್ದರು ಎಂದು ವಿವರಿಸಿದೆ.

ಈ ನೆರವು ನೀಡಿದ್ದಕ್ಕೆ ಪ್ರತಿಯಾಗಿ, ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಯ ಸಂದರ್ಶನದಲ್ಲಿ ಗಂಗ್ವಾರ್ ಕಡೆಯ ಒಬ್ಬ ಅಭ್ಯರ್ಥಿಗೆ ಹೆಚ್ಚಿನ ಅಂಕ ಕೊಡುವ ಭರವಸೆ ಶಿವಶಂಕರಪ್ಪ ನೀಡಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದೆ.

ಶಿವಶಂಕರಪ್ಪ ಅವರು ಅಭ್ಯರ್ಥಿಗಳಿಂದ ₹10 ಲಕ್ಷ ನಗದು ಮತ್ತು ಉಳಿದ ಮೊತ್ತವನ್ನು ಖಾಲಿ ಚೆಕ್‌ ಹಾಗೂ ಪ್ರಾಮಿಸರಿ ನೋಟ್‌ಗಳ ಮೂಲಕ ಪಡೆದುಕೊಂಡಿದ್ದರು. ಇತರ ಆರೋಪಿಗಳೂ ಇದೇ ತಂತ್ರ ಅನುಸರಿಸಿದ್ದರು. ಹೀಗೆ ಪಡೆದಿದ್ದ ಹಣದಲ್ಲಿ ಗಂಗ್ವಾರ್‌ ಪರವಾಗಿ ₹52.30 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಲಾಗಿತ್ತು. ಜತೆಗೆ ಗಂಗ್ವಾರ್‌ ಮತ್ತು ಕುಟುಂಬದವರ ಪ್ರಯಾಣಕ್ಕಾಗಿ ₹13.31 ಲಕ್ಷ ಮೌಲ್ಯದ ವಿಮಾನಯಾನ ಟಿಕೆಟ್‌ಗಳನ್ನು ಖರೀದಿಸಲಾಗಿತ್ತು ಎಂದು ವಿವರಿಸಿದೆ.

261115-51-1824464912