ಬೆಂಗಳೂರು: ‘ಸರ್ಕಾರಿ ಶಿಕ್ಷಕರ ಕಾರ್ಯನಿಷ್ಠೆಯನ್ನು ಪ್ರಶ್ನಿಸುವ ಮೊದಲು ಅವರ ಮೇಲಿನ ಆಡಳಿತಾತ್ಮಕ ಹೊರೆಗಳನ್ನು ಐಶ್ವರ್ಯಾ ಶಿವಕುಮಾರ್ ಅವರು ಅರಿತುಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎ.ಪಿ.ರಂಗನಾಥ ಹೇಳಿದ್ದಾರೆ.

‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರು ಸರ್ಕಾರಿ ಶಾಲಾ ಶಿಕ್ಷಕರ ವೃತ್ತಿಪರ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ನೀಡಿರುವುದು ಖಂಡನೀಯ. ಶಿಕ್ಷಣ ವ್ಯವಸ್ಥೆ, ಶಿಕ್ಷಕರ ಸೇವಾ ಪರಿಸ್ಥಿತಿ ಮತ್ತು ಅವರಿಗೆ ನೀಡಿರುವ ಬಹುಮುಖ ಜವಾಬ್ದಾರಿಗಳು ಅವರಿಗೆ ಗೊತ್ತಿಲ್ಲವೇ’ ಎಂದು ‍ಪ್ರಶ್ನಿಸಿದ್ದಾರೆ.

‘ಐಶ್ವರ್ಯಾ ಅವರು ಸರ್ಕಾರಿ ಶಾಲೆ ಹಾಗೂ ಶಿಕ್ಷಕರ ಕುರಿತು ಪ್ರೀತಿ, ಗೌರವ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯ ಮತ್ತು ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳೊಂದಿಗೆ ಹೋಲಿಸಿ, ಅವರ ಸಾಮರ್ಥ್ಯ– ಬದ್ಧತೆ ಪ್ರಶ್ನಿಸುವುದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

261107-4-1901231863