ಕರ್ನಾಟಕದ ಗುಡ್ಡ, ಬೆಟ್ಟಗಳು ಪ್ರಕೃತಿ ಪ್ರಿಯರ ನೆಚ್ಚಿನ ತಾಣಗಳು. ಭೂ ಕುಸಿತ, ಹವಾಮಾನ ವೈಪರಿತ್ಯ, ಮಳೆ ಅನಿಶ್ಚಿತತೆ, ತಾಪಮಾನ ಏರಿಕೆ... ಇವೆಲ್ಲ ಪಶ್ಚಿಮ ಘಟ್ಟಗಳೂ ಒಳಗೊಂಡಂತೆ ಬೆಟ್ಟ ಗುಡ್ಡಗಳಿಗೆ ಗಂಡಾಂತರ ಒದಗಿರುವ ಕಾರಣದಿಂದ. ಇಂತಹ ಬೆಟ್ಟಗಳ ಉಳಿವು, ಅಸ್ತಿತ್ವದಲ್ಲಿ ನಮ್ಮ ಅಸ್ತಿತ್ವವೂ ಅಡಗಿದೆ
ಕನ್ನಡ ನಾಡಿನ ಹಿರಿಮೆ ಗರಿಮೆಯ ಹೆಚ್ಚಿಸುವಲ್ಲಿ, ನಾಡಿನ ಗರ್ವಕ್ಕೆ ಕಾರಣವಾದ ಅಂಶಗಳಲ್ಲಿ ಇಲ್ಲಿನ ಪ್ರಾಕೃತಿಕ ಸಿರಿ ಸಂಪತ್ತಿನ ಕಾಣ್ಕೆ ಹಿರಿದು. ಕರ್ನಾಟಕದ ಪಶ್ಚಿಮಕ್ಕೆ ಬರುವ ಪಶ್ಚಿಮ ಘಟ್ಟಗಳ ವನ ಸಿರಿ ಸಮೃದ್ಧಿಯು ನಾಡಿನ ಕಳಸ ಅಥವಾ ಹೃದಯವಿದ್ದಂತೆ. ಈ ಘಟ್ಟಗಳಲ್ಲಿಯ ದಟ್ಟ, ಹಚ್ಚಹಸಿರಿನ ಕಾಡುಗಳು ಮತ್ತವುಗಳ ಸಗ್ಗದ ಸಿರಿ ಸೌಂದರ್ಯ, ಆ ತಪ್ಪಲಿನಲ್ಲಿ ಹುಟ್ಟಿ ಹರಿಯುವ ನದಿ,ಝರಿಗಳು, ಧುಮ್ಮಿಕ್ಕುವ ಜಲಪಾತಗಳು, ಪೊರೆಯುವ ಜೀವ ವೈವಿಧ್ಯತೆ... ಮುಂತಾದವುಗಳಿಂದ ಗಮನ ಸೆಳೆಯುತ್ತದೆ.
ಇದರೊಂದಿಗೆ ನಾಡಿನ ಉದ್ದಗಲಕ್ಕೂ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಪ್ರಮುಖ ಬೆಟ್ಟಗಳನ್ನು ಕಾಣಬಹುದು. ಭೌಗೋಳಿಕ ಸ್ಥಾನ, ನೈಸರ್ಗಿಕ ಲಕ್ಷಣಗಳು ಮತ್ತು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಹಿನ್ನಲೆಯಲ್ಲಿ ಅವುಗಳನ್ನು ವರ್ಗೀಕರಿಸಬಹುದು. ಕರ್ನಾಟಕದಲ್ಲಿ ಪ್ರವಾಸೋದ್ಯಮದ ಏಳಿಗೆ ಮತ್ತದು ದಿನೆ ದಿನೇ ಹೆಚ್ಚೆಚ್ಚು ಜನಪ್ರಿಯ, ಶ್ರೀಮಂತಗೊಳ್ಳುವಲ್ಲಿ ಇಂತಹ ವಿಶಿಷ್ಟ ಹಾಗೆ ವಿಭಿನ್ನ ಬೆಟ್ಟಗಳ ಕೊಡುಗೆ ಬೆಟ್ಟದಷ್ಟಿದೆ.
ಕರುನಾಡಿನ ಹಸಿರು ಕಾಡು, ಮೋಡ, ಮಂಜಿನ ಮೇಲಾಟ, ನೇಸರನ ನೆರಳು ಬೆಳಕಿನ ಆಟದಂತಹ ಮನಮೋಹಕ, ವಿಹಂಗಮ ಪ್ರಾಕೃತಿಕ ದೃಶ್ಯಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಚಾರಣ ಪ್ರಿಯರಿಗೆ ಸದಾ ಉದ್ದೀಪಿಸುತ್ತವೆ. ಕಾವೇರಿ, ತುಂಗಾ, ಭದ್ರಾ, ಶರಾವತಿ, ಕಾಳಿ ನದಿಗಳು. ಉಗಮ ಸ್ಥಾನ ಇದೇ ಪಶ್ಚಿಮ ಘಟ್ಟಗಳು.
ಇನ್ನು, ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ಬೆಟ್ಟಗಳಿಗೆ ಬರವಿಲ್ಲ. ನಗರ, ಯಾಂತ್ರಿಕ ಬದುಕು, ಏಕತಾನತೆಯಿಂದ ಹೊರ ಬರಲು, ಒಂದಿಷ್ಟು ವಿರಾಮ ಬಯಸುವವರಿಗೆ, ಪ್ರಕೃತಿ ಮಡಿಲಲ್ಲಿ ಕೆಲ ಕಾಲ ಕಳೆದು ಹೋಗಲು ಇಚ್ಛಿಸುವವರಿಗೆ ಹತ್ತಾರು ಸ್ಪಾಟ್ಗಳಿವೆ. ಚಿಕ್ಕಬಳ್ಳಾಪುರದ ನಂದಿ ಬೆಟ್ಟ, ಸ್ಕಂದಗಿರಿ, ಸಾವನದುರ್ಗ ತುಮಕೂರು ಜಿಲ್ಲೆಯ ಹುಲಿಯೂರುದುರ್ಗಬೆಟ್ಟ, ಕೈಲಾಸಗಿರಿ ಬೆಟ್ಟಗಳು. ಚಾರಣ, ಪ್ರಕೃತಿ ವೀಕ್ಷಣೆಗೆ ಪ್ರಸಿದ್ಧವಾಗಿದ್ದು, ನಿತ್ಯವೂ ಈ ತಾಣ ನಿಸರ್ಗಪ್ರಿಯರಿಂದ ತುಂಬಿರುತ್ತವೆ.
ಹಾಗೆ ಹತ್ತು ಹಲವು ಬೆಟ್ಟಗಳಲ್ಲಿ ಕರ್ನಾಟಕದ ಇತಿಹಾಸ, ಕೋಟೆ ನಿರ್ಮಾಣ ಮತ್ತು ವೀರ ಪರಂಪರೆ ಬಿಂಬಿಸುವ ಕೋಟೆಗಳಿಗೆ ಕೊರತೆ ಇಲ್ಲ. ಮುಖ್ಯವಾಗಿ ಚಿತ್ರದುರ್ಗದ ಬೆಟ್ಟಗಳು, ತುಮಕೂರಿನ ಮಧುಗಿರಿ ಬೆಟ್ಟ , ಹುಲಿಯೂರುದುರ್ಗ ಬೆಟ್ಟ, ಸಾವನದುರ್ಗ ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಚಿತ್ರದುರ್ಗದ ಬೆಟ್ಟಗಳಂತೂ ಕರ್ನಾಟಕದ ಶೌರ್ಯ ಮತ್ತು ಐತಿಹಾಸಿಕ ಪರಂಪರೆ ಸಾರುತ್ತವೆ. ಹಂಪಿಯ ಬೆಟ್ಟಗಳು ಶಿಲಾ ಸಂಪತ್ತಿನಿಂದ ಕೂಡಿದ್ದು, ಕಲಾತ್ಮಕ ಸ್ಮಾರಕಗಳ ಆಗರವೇ ಆಗಿವೆ. ಅದರೊಟ್ಟಿಗೆ ಬೆಟ್ಟಗಳ ಮೇಲಿರುವ ಕೋಟೆ ಹಿಂದಿನ ಕಾಲದ ರಕ್ಷಣಾ ವ್ಯವಸ್ಥೆ, ಆಡಳಿತದ ಇತಿಹಾಸವನ್ನು ಅರಿಯಲಿಕ್ಕೆ ಸಹಾಯಕವಾಗಿವೆ.
ಮೈಸೂರಿನ ಚಾಮುಂಡಿ ಬೆಟ್ಟ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಚಿಕ್ಕಮಗಳೂರು ಬಾಬಾ ಬುಡನ್ ಗಿರಿ, ಶಿವಮೊಗ್ಗದ ಕೊಡಚಾದ್ರಿ, ಗದಗದ ಕಪ್ಪತಗುಡ್ಡ, ಸವದತ್ತಿ ಯಲ್ಲಮ್ಮನ ಗುಡ್ಡ. ಇಲ್ಲಿನ ದೇವಾಲಯಗಳು,ಅಲ್ಲಿ ನಡೆಯುವ ಜಾತ್ರೆಗಳು, ಧಾರ್ಮಿಕ ಆಚರಣೆ, ಜನಪದ ಸಂಪ್ರದಾಯ ಮತ್ತು ಯಾತ್ರಾ ಸ್ಥಳಗಳಿಂದ ಸುಪ್ರಸಿದ್ಧಿ ಪಡೆದಿವೆ. ಶ್ರವಣಬೆಳಗೊಳದ ವಿಂಧ್ಯಾಗಿರಿ ಬೆಟ್ಟವು ಜೈನ ಧರ್ಮದ ಪ್ರಮುಖ ಪವಿತ್ರ ಸ್ಥಳವಾಗಿದೆ.
ಹಾಗೆಯೇ ವಿಶಿಷ್ಟ ನೈಸರ್ಗಿಕ ರಚನೆಗಳಿಗೆ ಪ್ರಸಿದ್ಧವಾದ ಬೆಟ್ಟಗಳೂ ಈ ನೆಲ್ಲದಲ್ಲಿವೆ. ಅವೆಲ್ಲ ಭೌಗೋಳಿಕ ರಚನೆ, ಬೃಹತ್ ಬಂಡೆಗಳು ಮತ್ತು ವಿಶಿಷ್ಟ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ಉತ್ತರ ಕನ್ನಡದ ಯಾಣದ ಬೆಟ್ಟಗಳು ಇದಕ್ಕೊಂದು ಸೂಕ್ತ ಉದಾಹರಣೆ. ಉಳಿದಂತೆ ಸಾವನದುರ್ಗ, ಚಿತ್ರದುರ್ಗದ ಬೆಟ್ಟಗಳು, ಮಧುಗಿರಿ ಬೆಟ್ಟ, ಮುಳ್ಳಯ್ಯನಗಿರಿಗಳನ್ನೂ ಉದಾಹರಿಸಬಹುದು.
ಕುದುರೆಮುಖ, ಪುಷ್ಪಗಿರಿ, ಬ್ರಹ್ಮಗಿರಿ, ಕೊಡಚಾದ್ರಿ, ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಕುಮಾರ ಪರ್ವತ, ಆಗುಂಬೆ ಪರ್ವತ ಪ್ರದೇಶಗಳು ಜೀವವೈವಿಧ್ಯ, ಅಪರೂಪದ ಸಸ್ಯಗಳು, ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತು ಹೊಂದಿರುವ ಬೆಟ್ಟಗಳೆಂದು ಗುರುತಿಸಿಕೊಂಡಿವೆ.
ಇಂತಹ ವೈಶಿಷ್ಟ್ಯಪೂರ್ಣ ಬೆಟ್ಟಗಳನ್ನು ಕೇವಲ ಪ್ರವಾಸಿ ತಾಣದಿಂದ ನೋಡಲು ಸಾಧ್ಯವಿಲ್ಲ. ಇವೆಲ್ಲ ಬೆಟ್ಟಗಳು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಪರಿಸರ ವಿಜ್ಞಾನಿಗಳಿಗೆ ಕೌತುಕಣದ ತಾಣವಾಗುವುದರ ಜೊತೆಗೆ ನೈಸರ್ಗಿಕ ಪ್ರಯೋಗಾಲಯಗಳಂತಿವೆ. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂವಿಜ್ಞಾನ, ಹವಾಮಾನಶಾಸ್ತ್ರ ಮತ್ತು ಪರಿಸರ ಅಧ್ಯಯನಕ್ಕೆ ತೆರೆದುಕೊಳ್ಳಲು ವಿಫುಲ ಅವಕಾಶ ಒದಗಿಸುತ್ತವೆ. ಹಾಗೆ ಭಾಗಶಃ ಬೆಟ್ಟಗಳ ಒಡಲಲ್ಲಿ ಕಬ್ಬಿಣದ ಅದಿರು, ಮ್ಯಾಂಗನೀಸ್ ಸೇರಿದಂತೆ ಇತರ ಖನಿಜ ಸಂಪನ್ಮೂಲಗಳೂ ಕಂಡುಬರುತ್ತವೆ. ಹೀಗೆ ಅಪಾರ ನೈಸರ್ಗಿಕ ಸಂಪನ್ಮೂಲ ಹೊಂದಿರುವ ಇವು ನಾಡಿನ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ವಿಶೇಷವಾಗಿ ಪಶ್ಚಿಮ ಘಟ್ಟಗಳು ಅರಬ್ಬಿ ಸಮುದ್ರದಿಂದ ಬರುವ ತೇವಾಂಶಭರಿತ ಗಾಳಿಯನ್ನು ತಡೆದು ಪಶ್ಚಿಮ ಕರಾವಳಿ ಹಾಗೂ ಘಟ್ಟಗಳ ಕೆಲವು ಭಾಗಗಳಲ್ಲಿ ಮಳೆಯಾಗಲು ಕಾರಣವಾಗಿವೆ. ಬೆಟ್ಟಗಳಲ್ಲಿರುವ ಅರಣ್ಯಗಳು ಸ್ಥಳೀಯ ತಾಪಮಾನ ಮತ್ತು ತೇವಾಂಶದ ಸಮತೋಲನಕ್ಕೆ ಕಾರಣವಾಗಿದೆ.
ನೈಸರ್ಗಿಕಶಕ್ತಿ, ಜಲಮೂಲ ತಾಣ ನಮ್ಮ ಕರುನಾಡ ಎತ್ತರದ ಬೆಟ್ಟಗಳು;ಇದರ ಮಹತ್ವ ಗೊತ್ತೆ?
ಒಂದು ಸಾಲಿನಲ್ಲಿಕರ್ನಾಟಕದ ಬೆಟ್ಟಗಳು ಕೇವಲ ಪ್ರವಾಸೀ ತಾಣಗಳಲ್ಲ, ಅವು ನಾಡಿನ ಪರಿಸರ ಸಮತೋಲನ, ಜಲಮೂಲಗಳು ಮತ್ತು ಜೀವವೈವಿಧ್ಯವನ್ನು ಕಾಪಾಡುವ ಅಮೂಲ್ಯ ನೈಸರ್ಗಿಕ ಸಂಪತ್ತಾಗಿವೆ.ಏನು? ಏಕೆ? ಹೇಗೆ?ಕರ್ನಾಟಕದ ಬೆಟ್ಟಗಳು ಏಕೆ ಮುಖ್ಯವಾಗಿವೆ?
ಈ ಬೆಟ್ಟಗಳು ರಾಜ್ಯದ ಪ್ರಮುಖ ನದಿಗಳ ಉಗಮಸ್ಥಾನಗಳಾಗಿವೆ ಮತ್ತು ಕೃಷಿ, ಕುಡಿಯುವ ನೀರು ಹಾಗೂ ಜಲವಿದ್ಯುತ್ ಉತ್ಪಾದನೆಗೆ ಅಗತ್ಯವಾದ ನೀರಿನ ಮೂಲಗಳನ್ನು ಪೂರೈಸುತ್ತವೆ.
ಬೆಟ್ಟಗಳ ಭೌಗೋಳಿಕ ಮತ್ತು ಐತಿಹಾಸಿಕ ಮಹತ್ವವೇನು?
ಪಶ್ಚಿಮ ಘಟ್ಟದ ಬೆಟ್ಟಗಳು ಅಪಾರ ಜೀವವೈವಿಧ್ಯವನ್ನು ಹೊಂದಿದ್ದರೆ, ಮಧುಗಿರಿ, ಚಿತ್ರದುರ್ಗ ಮತ್ತು ಸಾವನದುರ್ಗದಂತಹ ಬೆಟ್ಟಗಳು ಐತಿಹಾಸಿಕ ಕೋಟೆಗಳು ಮತ್ತು ವೀರ ಪರಂಪರೆಯ ತಾಣಗಳಾಗಿವೆ.
ಪ್ರಕೃತಿಯ ಮೇಲೆ ಉಂಟಾಗಿರುವ ಗಂಡಾಂತರವೇನು?
ಅವಿವೇಚನೆಯ ಅಭಿವೃದ್ಧಿ, ಅಕ್ರಮ ಗಣಿಗಾರಿಕೆ ಮತ್ತು ಅರಣ್ಯನಾಶದಿಂದಾಗಿ ಭೂ ಕುಸಿತ, ಹವಾಮಾನ ವೈಪರಿತ್ಯ ಹಾಗೂ ತಾಪಮಾನ ಏರಿಕೆಯಂತಹ ಗಂಭೀರ ಸಮಸ್ಯೆಗಳು ಉದ್ಭವಿಸಿವೆ.
ಬೆಟ್ಟಗಳ ಸಂರಕ್ಷಣೆಗೆ ನಾವು ಏನು ಮಾಡಬಹುದು?
ಅರಣ್ಯ ನಾಶವನ್ನು ತಡೆಗಟ್ಟಿ, ಸ್ಥಳೀಯ ಸಸ್ಯಗಳನ್ನು ಬೆಳೆಸುವ ಮೂಲಕ ಪರಿಸರ ಪುನರುಜ್ಜೀವನಗೊಳಿಸಬೇಕು ಮತ್ತು ಪ್ರಕೃತಿ ಸ್ನೇಹಿ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.
ಈ ಬೆಟ್ಟಗಳು ಸಂಶೋಧಕರಿಗೆ ಹೇಗೆ ಸಹಕಾರಿ?
ಇವು ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂವಿಜ್ಞಾನ ಮತ್ತು ಹವಾಮಾನಶಾಸ್ತ್ರ ಅಧ್ಯಯನಕ್ಕೆ ತೆರೆದ ನೈಸರ್ಗಿಕ ಪ್ರಯೋಗಾಲಯಗಳಾಗಿ ಕಾರ್ಯನಿರ್ವಹಿಸುತ್ತವೆ.
&ಪ್ರಮುಖ ಅಂಕಿಅಂಶಗಳು06 ನವೆಂಬರ್ 2026ಲೇಖನ ಪ್ರಕಟಣೆಯ ದಿನಾಂಕಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆದುರಾದೃಷ್ಟವಶಾತ್, ಮಾನವ ಕೇಂದ್ರಿತ ಅಭಿವೃದ್ದಿಯ ಕಾರಣದಿಂದ ಇಂತಹ ಬೆಟ್ಟಗಳು ಇತ್ತೀಚೆಗೆ ತುಂಬಾ ಕೆಟ್ಟ ದಿನಗಳನ್ನು ಎದುರಿಸುತ್ತಿವೆ. ಭೂ ಕುಸಿತ, ಹವಮಾನ ವೈಪರಿತ್ಯ, ಮಳೆ ಅನಿಶ್ಚಿತತೆ, ತಾಪಮಾನ ಏರಿಕೆ ಇವೆಲ್ಲ ಪಶ್ಚಿಮ ಘಟ್ಟಗಳೂ ಒಳಗೊಂಡಂತೆ ಬೆಟ್ಟ ಗುಡ್ಡಗಳಿಗೆ ಗಂಡಾಂತರ ಒದಗಿರುವ ಕಾರಣದಿಂದ. ಇವುಗಳ ಉಳಿವು ಮತ್ತು ಅಸ್ತಿತ್ವದಲ್ಲಿ ನಮ್ಮ ಅಸ್ತಿತ್ವವೂ ಅಡಗಿದೆ ಎಂಬ ವಿವೇಕ ಜಾಗೃತವಾಗಬೇಕು.
ಹೀಗಾಗಿ ಅವುಗಳನ್ನು ತುರ್ತಾಗಿ ಸಂರಕ್ಷಿಸಬೇಕಿದೆ. ಇದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬರ ಕರ್ತವ್ಯವೂ ಹೌದು. ಮೊದಲು ಅರಣ್ಯ ನಾಶಕ್ಕೆ ಅಂಕೆ ಬೀಳಬೇಕು. ಸ್ಥಳೀಯ ಸಸ್ಯಗಳನ್ನು ಬೆಳೆಸಿ ಅರಣ್ಯ ಪುನರುಜ್ಜೀವನಗೊಳಿಸಬೇಕು. ಅಕ್ರಮ ಗಣಿ, ಪರಿಸರಕ್ಕೆ ಹಾನಿಕಾರಕ ಚಟುವಟಿಕೆಗಳನ್ನು ಪ್ರಾಮಾಣಿಕವಾಗಿ ನಿಯಂತ್ರಿಸಬೇಕು. ಪ್ರಕೃತಿ ಕೇಂದ್ರಿತ ಅಭಿವೃದ್ಧಿಗೆ ಅಂದರೆ ವೈಜ್ಞಾನಿಕ, ಪರಿಸರ ಸ್ನೇಹಿ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಅಂದಾಗ ಮಾತ್ರ ಪ್ರಕೃತಿಗಿಂತ ನಮ್ಮದೇ ಆದಿಯಲ್ಲಿ ಉಳಿಗಾಲ. ಇಲ್ಲದಿದ್ದರೆ ಕ್ಷಣ ಕ್ಷಣಕ್ಕೂ ಸಮೀಪಸಲಿದೆ ನಮ್ಮ ಕೊನೆಗಾಲ.
(ಲೇಖಕರು: ಚಾರಣಪ್ರಿಯರು)
ಕರ್ನಾಟಕದ ಮಲೆನಾಡು ಮತ್ತು ಬೆಟ್ಟಪ್ರದೇಶಗಳಲ್ಲಿ ಕೃಷಿಗೆ ವಿಶೇಷ ಮಹತ್ವ ಸಿಕ್ಕಿದೆ. ಕಾಫಿ, ಏಲಕ್ಕಿ, ಮೆಣಸು, ಅಡಕೆ... ಬೆಳೆಗಳ ಕೃಷಿಗೆ ಪೂರಕ ವಾತಾವರಣ ಇದೆ. ಅರಣ್ಯಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ನೆರವಾಗುತ್ತವೆ. ಜೇನುಸಾಕಣೆ, ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಇತರ ಅರಣ್ಯಾಧಾರಿತ ಜೀವನೋಪಾಯಗಳಿಗೆ ಅವಕಾಶ ಕಲ್ಪಿಸುತ್ತವೆ. ಮಳೆ ಹಂಚಿಕೆ, ಮಳೆ ನೀರು ಇಂಗುವಿಕೆ, ಮಣ್ಣಿನ ಸಂರಕ್ಷಣೆಯಲ್ಲಿ, ಜಲಮೂಲಗಳ ಸಂರಕ್ಷಣೆಯಲ್ಲಿ, ಸ್ಥಳೀಯ ಹವಾಮಾನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಅಪರೂಪದ ಸಸ್ಯಗಳು, ಪಕ್ಷಿಗಳು ಮತ್ತು ವನ್ಯಜೀವಿಗಳಿಗೆ ಬೆಟ್ಟದ ಕಾಡುಗಳು ಆಶ್ರಯ ತಾಣ ಆಗಿದೆ. ಕೃಷಿ, ಕುಡಿಯುವ ನೀರು ಮತ್ತು ಜಲವಿದ್ಯುತ್ ಉತ್ಪಾದನೆಗೆ ಅಗತ್ಯವಾದ ನೀರಿನ ಲಭ್ಯತೆಯು ಇದೇ ಬೆಟ್ಟಗಳನ್ನು ಅವಲಂಬಿಸಿದೆ.ಇವುಗಳ ಮಹತ್ವ ಏನುಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಶುಕ್ರವಾರ, 06 ನವೆಂಬರ್ 2026ಕರುನಾಡೋತ್ಸವ | ಉದಯವಾದರೂ ಕನ್ನಡನಾಡು ಕೇರಳದಲ್ಲೇ ಉಳಿಯಿತು ಕಾಸರಗೋಡುಕರುನಾಡೋತ್ಸವ: ಸಹ್ಯಾದ್ರಿ ಕಣಿವೆ ಅರ್ಥೈಸಿಕೊಳ್ಳಲು ನಾವು ಸೋಲುತ್ತಿರುವುದೆಲ್ಲಿ?ಕರುನಾಡೋತ್ಸವ: ನ್ಯಾಯಾಂಗದಲ್ಲೂ ಕನ್ನಡ ಮೆರೆಸುವ ವಕೀಲ ಮನೋಹರ ವಿಶ್ವಕರ್ಮ
