ಸೋಲಾಪುರ: ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯಿಂದಾಗಿ ಮುಂಬರುವ ದಿನಗಳಲ್ಲಿ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ, ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವಿಗೆ ಹಾರ್ವೆಸ್ಟರ್ ಯಂತ್ರ ಬಳಸುವ ಬದಲು ಕಾರ್ಮಿಕರ ಮೂಲಕ ಕೈಯಿಂದ ಕಬ್ಬು ಕಟಾವು ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದ್ದಾರೆ.

ಈ ಕುರಿತು ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ನಿರ್ದೇಶಕರಿಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿಗಳು, ಅತ್ಯಂತ ಕಡಿಮೆ ಹಾಗೂ ಅನಿಯಮಿತ ಮಳೆಯಾಗಿದೆ. ಇದರಿಂದ ಗಂಭೀರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಮತ್ತು ವಿಶೇಷವಾಗಿ ಪಶುಸಂಗೋಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.

ಹಾರ್ವೆಸ್ಟರ್ ಯಂತ್ರದ ಮೂಲಕ ಕಬ್ಬು ಕಟಾವು ಮಾಡಿದಾಗ ಕಬ್ಬಿನ ಮೇಲ್ಭಾಗದ ಹಸಿರು ಮೇವು (ವಾಡೆ) ಹಾಗೂ ಒಣಗಿದ ಕಬ್ಬಿನ ಸೊಪ್ಪು (ಪಾಚಟ್) ಹೊಲದಲ್ಲೇ ನಾಶವಾ ಗುತ್ತದೆ. ಆದರೆ ಕಾರ್ಮಿಕರ ಮೂಲಕ ಕೈಯಿಂದ ಕಟಾವು ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಮೇವು ಮತ್ತು ಸೊಪ್ಪು ಲಭ್ಯವಾಗುತ್ತದೆ ಎಂದಿದ್ದಾರೆ.

261107-26-902582238