ಬೆಂಗಳೂರು: ‘ಕಾಲ ಕೂಡಿಬರುತ್ತದೆ, ಎಲ್ಲವೂ ಸರಿಹೋಗಲಿದೆ’ಎನ್ನುವ ಮೂಲಕ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತಮ್ಮ ಹಾಗೂ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರ ಜತೆ ಮುನಿಸು ಮುಗಿದಿದೆ ಎಂಬ ಸುಳಿವು ನೀಡಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ವಿರುದ್ಧ ಜಾರಿ ನಿರ್ದೇಶನಾಲಯದ ದಾಳಿ ನಡೆದಾಗ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮನೆಗೆ ಬಂದಿದ್ದರು. ಎರಡು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮತ್ತೆ ಸಮಯ ಕೂಡಿ ಬರುತ್ತದೆ. ಅಹಿಂದ ಪರಿಕಲ್ಪನೆ ಒಂದೇ ಇದೆ. ಇಬ್ಬರು ಸೇರುವ ಸಮಯ ಬರುತ್ತದೆ’ ಎಂದರು.
‘ಕೆ.ಎನ್. ರಾಜಣ್ಣ ಪಕ್ಷ ಬಿಟ್ಟು ಹೋಗಲಿ’ ಎಂಬ ಸಚಿವ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ರಾಜಣ್ಣ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತಾರೆ. ಈ ಬಗ್ಗೆ ಮಾತನಾಡಲು ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಇದ್ದಾರೆ. ಅವರು ಯೋಚಿಸುತ್ತಾರೆ’ ಎಂದರು.
‘ಮೂರನೇ ಸಿ.ಎಂ ಬಗ್ಗೆ ಬಿಜೆಪಿ ಹೇಳಿಕೆ ವಾಸ್ತವಕ್ಕೆ ದೂರ. ಡಿ.ಕೆ. ಶಿವಕುಮಾರ್ ಅವರೇ ಇರುತ್ತಾರೆ. ಸರ್ಕಾರ ಯಶಸ್ಸು ಕಾಣಲು ಸ್ವಲ್ಪ ಸಮಯ ಬೇಕಾಗುತ್ತದೆ. ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಾರೆ. ಅವರನ್ನು ಕೆಳಗೆ ಇಳಿಸುವ ಪ್ರಶ್ನೆಯೇ ಇಲ್ಲ’ ಎಂದರು.
261107-4-1422982010

