ನ್ಯೂಝಿಲೆಂಡ್ ಎ ವಿರುದ್ಧದ 3ನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಲಿಂಕನ್ನ ಬರ್ಟ್ ಸಟ್ಕ್ಲಿಫ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಎ ತಂಡದ ನಾಯಕ ಮ್ಯಾಕ್ಸ್ ಚು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡಕ್ಕೆ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಒದಗಿಸಿದ್ದಾರೆ.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಯಶಸ್ವಿ ಜೈಸ್ವಾಲ್ ಕೇವಲ 127 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಹೀಗೆ ವಿಕೆಟ್ ಒಪ್ಪಿಸುವ ಮುನ್ನ ಜೈಸ್ವಾಲ್ 138 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 16 ಫೋರ್ಗಳೊಂದಿಗೆ 102 ರನ್ ಬಾರಿಸಿದ್ದಾರೆ.
ಇತ್ತ ಯಶಸ್ವಿ ಜೈಸ್ವಾಲ್ ಔಟಾದ ಬಳಿಕ ಇನಿಂಗ್ಸ್ ಕಟ್ಟುವ ಜವಾಬ್ದಾರಿ ವಹಿಸಿಕೊಂಡಿರುವ ಸಾಯಿ ಸುದರ್ಶನ್ 129 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಈ ಮೂಲಕ ಭಾರತ ಎ ತಂಡ 56 ಓವರ್ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿದೆ.
ಹ್ಯಾಗ್ಲಿ ಓವಲ್ನಲ್ಲಿ ಅಜೇಯ 155 ರನ್!
ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ನಿರಾಸೆ ಮೂಡಿಸಿದ್ದ ಯಶಸ್ವಿ ಜೈಸ್ವಾಲ್, ಎರಡನೇ ಇನ್ನಿಂಗ್ಸ್ನಲ್ಲಿ ಕೌಂಟರ್ ಅಟ್ಯಾಕ್ ನಡೆಸಿದ್ದರು. ಕೇವಲ 162 ಎಸೆತಗಳನ್ನು ಎದುರಿಸಿದ ಅವರು, ನ್ಯೂಝಿಲೆಂಡ್ ಬೌಲರ್ಗಳನ್ನು ಮನಬಂದಂತೆ ದಂಡಿಸಿ ಅಜೇಯ 155 ರನ್ ಚಚ್ಚಿದ್ದರು. ಈ ಸ್ಫೋಟಕ ಶತಕದ ನೆರವಿನಿಂದ ಭಾರತ ‘ಎ’ ತಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಇದೀಗ ಕಳೆದ ಪಂದ್ಯದ ಅಮೋಘ ಫಾರ್ಮ್ ಅನ್ನು ಮೂರನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲೂ ಮುಂದುವರಿಸಿದ ಜೈಸ್ವಾಲ್, ಲಿಂಕನ್ನ ಬರ್ಟ್ ಸಟ್ಕ್ಲಿಫ್ ಓವಲ್ ಮೈದಾನದಲ್ಲಿ ಮತ್ತೊಮ್ಮೆ ಆತಿಥೇಯರನ್ನು ಕಾಡಿದರು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಜೊತೆಗೂಡಿ ಮೊದಲ ವಿಕೆಟ್ಗೆ 175 ರನ್ಗಳ ಬೃಹತ್ ಜೊತೆಯಾಟವಾಡಿದ ಜೈಸ್ವಾಲ್, 138 ಎಸೆತಗಳಲ್ಲಿ 102 ರನ್ ಸಿಡಿಸಿದ್ದಾರೆ. ಈ ಮೂಲಕ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ.
ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು , ಕರ್ಟಿಸ್ ಹೀಫಿ , ಡೀನ್ ಫಾಕ್ಸ್ಕ್ರಾಫ್ಟ್ , ಮ್ಯಾಥ್ಯೂ ಬಾಯ್ಲ್ ,
ಟಿಮ್ ರಾಬಿನ್ಸನ್ , ಮ್ಯಾಕ್ಸ್ ಚು (ನಾಯಕ) , ಕ್ಯಾಮರೋನ್ ಪಾಲ್ , ಬ್ರೆಟ್ ರಾಂಡೆಲ್ , ಡನ್ರು ಫರ್ನ್ಸ್ , ಜ್ಯಾಕ್ ಗಿಬ್ಸನ್.
ಇದನ್ನೂ ಓದಿ: 40 ಕೋಟಿ ರೂ.ಗೆ ಬೇಡಿಕೆಯಿಟ್ಟ ಆ ಇಬ್ಬರು ಆಟಗಾರರು ಯಾರು?
ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ಧ್ರುವ್ ಜುರೆಲ್ (ನಾಯಕ) , ತಿಲಕ್ ವರ್ಮಾ , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ಪ್ರಸಿದ್ಧ್ ಕೃಷ್ಣ , ಜಸ್ಪ್ರೀತ್ ಬುಮ್ರಾ , ಮುಖೇಶ್ ಕುಮಾರ್ ,
ಮುಖೇಶ್ ಚೌಧರಿ.

