ಪ್ರಜಾವಾಣಿ ಬಳಗದ ಡಿಜಿಟಲ್‌ ವಿಭಾಗವು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ನವೆಂಬರ್‌ ತಿಂಗಳನ್ನು ಕನ್ನಡ, ಕರ್ನಾಟಕದ ವಿಚಾರದಲ್ಲಿನ ಮಹತ್ವದ ಹಾದಿ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ವಿಷಯಗಳ ಮೇಲೆ, ತಜ್ಞರು, ಸಾಧಕರು, ಪ್ರಮುಖರ ಲೇಖನಗಳನ್ನು ಪ್ರಕಟಿಸುತ್ತಿದೆ... ಕರುನಾಡೋತ್ಸವದಲ್ಲಿ ಇಂದಿನ ವಿಶೇಷ ಲೇಖನಗಳ ಪಟ್ಟಿ ಇಲ್ಲಿದೆ. ಸಂಪೂರ್ಣ ಮಾಹಿತಿಗಾಗಿ https://www.prajavani.net/karunadotsava ಭೇಟಿ ಕೊಡಿ

ಕರುನಾಡೋತ್ಸವ: ಉಡುಪಿಯಿಂದ ಇಸ್ರೊವರೆಗೆ ಯು.ಆರ್‌.ರಾವ್‌ ಬಾನೆತ್ತರದ ಸಾಧನೆ

ಉಡುಪಿ: ಅದು 1975ರ ಏಪ್ರಿಲ್‌ 19,  ಸೋವಿಯೆಟ್‌ ಯೂನಿಯನ್‌ನ (ರಷ್ಯಾ) ಕಪುಸ್ಟಿನ್‌ ಯಾರ್‌ ಉಡ್ಡಯನ ಕೇಂದ್ರದಿಂದ ಕಾಸ್ಮೋಸ್‌–3 ಎಂ ರಾಕೆಟ್‌ ನಭಕ್ಕೆ ಚಿಮ್ಮುತ್ತಿದ್ದಂತೆ ಭಾರತದ ವಿಜ್ಞಾನಿಗಳ ಎದೆಬಡಿತವೂ ಹೆಚ್ಚಾಗಿತ್ತು. ಉಡ್ಡಯನ ಯಶಸ್ವಿಯಾಗಿ ಉಪಗ್ರಹವು ಕಕ್ಷೆ ತಲುಪಿತ್ತಿದ್ದಂತೆ ಎಲ್ಲರೂ ನಿಟ್ಟುಸಿರು ಬಿಟ್ಟರು. ಅವರ ನಿಟ್ಟುಸಿರಿನಲ್ಲಿ ನಮ್ಮ ದೇಶವು ಬಾಹ್ಯಾಕಾಶ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನೆಮ್ಮದಿಯೂ ಅಡಗಿತ್ತು.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಪ್ರಜಾವಾಣಿ ಕರುನಾಡೋತ್ಸವ| ಗಡಿನಾಡ ಪರಂಪರೆಯ ‘ನಾಡೋಜ ಕಯ್ಯಾರ ಕಿಞ್ಞಣ್ಣ ರೈ’ಕರುನಾಡೋತ್ಸವ | ಉದಯವಾದರೂ ಕನ್ನಡನಾಡು ಕೇರಳದಲ್ಲೇ ಉಳಿಯಿತು ಕಾಸರಗೋಡು

ಐದು ದಶಕ ಕಳೆದರೂ ಮಾಸದ ಹೊಳಪು: ಕನ್ನಡಿಗರ ಸ್ವಾಭಿಮಾನದ ಪ್ರತೀಕ ‘ಬಂಗಾರದ ಮನುಷ್ಯ’

ಕನ್ನಡ ರಾಜ್ಯೋತ್ಸವದ ಈ ಸಂಭ್ರಮದಲ್ಲಿ ನಾಡಿನ ಅಸ್ಮಿತೆ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿದ ಸಂದರ್ಭಗಳನ್ನು ನೆನೆಯುವಾಗ ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಇರಲಿ, ಪರದೆ ಇಳಿದ ತಕ್ಷಣ ಮುಗಿದುಹೋಗುತ್ತದೆ. ಆದರೆ 1972ರಲ್ಲಿ ತೆರೆಕಂಡ ಎಸ್. ಸಿದ್ದಲಿಂಗಯ್ಯನವರ ನಿರ್ದೇಶನದ ಈ ಚಿತ್ರ ಹಾಗಲ್ಲ. ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಬಂದ ಮೇಲೆಯೇ ಅವರ ನಿಜವಾದ ಬದುಕಿನಲ್ಲಿ ಈ ಸಿನಿಮಾದ ಪ್ರಭಾವ ಶುರುವಾಗಿತ್ತು.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಪದಕಟ್ಟು-6: ಪ್ರಾಚೀನತೆಯಷ್ಟೇ ಅಲ್ಲ, ಸರಳ–ಸೌಂದರ್ಯವೂ ಕನ್ನಡದ ಹೆಗ್ಗಳಿಕೆ

ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡ ವೈಶಿಷ್ಟ್ಯವೆಂದರೆ ಅದರ ಸರಳತೆ ಮತ್ತು ನಾದ ಸೌಂದರ್ಯ. ಹೀಗಾಗಿ ಕನ್ನಡದಲ್ಲಿ ಬಳಕೆಯಲ್ಲಿರುವ ಬೇರೆ ಭಾಷೆಗಳ ಪದಗಳಿಗೆ ಪರ್ಯಾಯವನ್ನು ಕಟ್ಟುವ ಸಂದರ್ಭದಲ್ಲಿ ವ್ಯಾಕರಣಬದ್ಧವಾಗಿ ಇರಬೇಕಾದುದು ಎಷ್ಟು ಮುಖ್ಯವೋ ಅಷ್ಟೇ ಮೂಕ್ಯವಾದುದು ಈ ಎರಡೂ ಸಂಗತಿಗಳನ್ನು ಗಮನಿಸಬೇಕಾದುದು.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಕರುನಾಡೋತ್ಸವ: ಬಂದಿದೆ ಬಿರುಸಿನ ಕನ್ನಡ ಗಾಳಿ...

‘28’: ಮೌನದ ಪದರಗಳನ್ನು ಒಡೆದು ಹುಟ್ಟಿದ ಕವಿತೆಗಳು

ಮುಟ್ಟು – ಇದು ಕೇವಲ ದೇಹದ ಕ್ರಿಯೆಯಷ್ಟೇ ಅಲ್ಲ, ಮೌನದ ಪದರಗಳ ಕೆಳಗೆ ಹುದುಗಿರುವ ಸಾವಿರಾರು ಹೆಣ್ಣುಮನಗಳ ಕಥೆ. ದಿನಬಳಕೆಯ ವಸ್ತುವೊಂದನ್ನು ಬಹಿರಂಗವಾಗಿ ಕೇಳುವುದರಿಂದ ಹಿಡಿದು, ಕಪ್ಪು ಕವರ್‌ನೊಳಗೆ ಮುಚ್ಚಿಟ್ಟು ತರುವವರೆಗಿನ ಪ್ರತಿ ಹಂತದಲ್ಲೂ ಸಮಾಜ ನಿರ್ಮಿಸಿದ ಅಪರಾಧ ಪ್ರಜ್ಞೆಯೊಂದು ನಮಗೆ ಎದುರಾಗುತ್ತಲೇ ಇರುತ್ತದೆ.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

‘ನಮಸ್ಕಾರ ದೇವ್ರು’ ಎನ್ನುತ್ತಾ ಜಗತ್ತು ತೋರಿಸುತ್ತಿರುವ ಕನ್ನಡದ Gen Z ಯೂಟ್ಯೂಬರ್

‘ನಮಸ್ಕಾರ ದೇವ್ರು...’ ಎನ್ನುತ್ತಾ ದೇಶ-ವಿದೇಶ ಸುತ್ತುತ್ತಿರುವ ‘ಜೆನ್ ಝೀ’ (Gen Z) ಯೂಟ್ಯೂಬರ್ ‘ಡಾ. ಬ್ರೋ’ ಅಲಿಯಾಸ್ ಗಗನ್ ಶ್ರೀನಿವಾಸ್ ಅವರು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಚಿರಪರಿಚಿತ. ಪಕ್ಕದ ಮನೆಯ ಹುಡುಗನಂತಿರುವ ಸರಳ ಭಾಷೆ ಹಾಗೂ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅಲ್ಲಿನ ವಿಶೇಷತೆಯನ್ನು ಕನ್ನಡಿಗರಿಗೆ ಆಡುಭಾಷೆಯಲ್ಲಿ ತಲುಪಿಸುವ ಅವರ ಶೈಲಿ ಭಾರಿ ಜನಪ್ರಿಯವಾಗಿದೆ.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಅಮೆರಿಕ ಮಹಿಳೆ ಬಾಯಲ್ಲಿ ನಲಿದಾಡುವ ಕನ್ನಡ.. ಇತರರಿಗೆ ಮಾದರಿ ಭಾಷಾ ಪ್ರೇಮ

ಕಲೆಯ ಮೂಲಸತ್ವದೊಂದಿಗೆ ವಿದೇಶಕ್ಕೂ ಯಕ್ಷಗಾನದ ಕಂಪು ಹರಡಿದ ಶಿವಾನಂದ ಹೆಗಡೆ

ಹೊನ್ನಾವರ ತಾಲ್ಲೂಕಿನ ಗುಣವಂತೆಯ ರಾಷ್ಟ್ರೀಯ ಹೆದ್ದಾರಿಗೆ ಸಮೀಪದ ಹಳ್ಳಿ ಕೆರೆಮನೆಯಲ್ಲಿ ಯಕ್ಷಗಾನ ಕಲಾವಿದರ ಕುಟುಂಬವೊಂದು ಕಟ್ಟಿದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಇದೆ. ಈ ಮಂಡಳಿಗೆ ಯುನೆಸ್ಕೊ ಮಾನ್ಯತೆ ಸಿಕ್ಕಿದೆ. ಬಡಗು ತಿಟ್ಟಿನ ಯಕ್ಷಗಾನ ಕಲೆಯನ್ನು ಜಗದಗಲಕ್ಕೆ ಪಸರಿಸಿದ ಕೀರ್ತಿ ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಸಲ್ಲುತ್ತದೆ.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಅಮೆರಿಕ ಮಹಿಳೆ ಬಾಯಲ್ಲಿ ನಲಿದಾಡುವ ಕನ್ನಡ.. ಇತರರಿಗೆ ಮಾದರಿ ಭಾಷಾ ಪ್ರೇಮ

ವಿದೇಶಗಳಿಂದ ಅಧ್ಯಯನಕ್ಕೆ ಬರುವವರು, ಇಂಗ್ಲಿಷ್ ಭಾಷೆಯಲ್ಲೇ ಮಾಹಿತಿ ಹೆಕ್ಕಲು ಪ್ರಯತ್ನಿಸುತ್ತಾರೆ. ಆದರೆ, ಅಮೆರಿಕದ ವಿಕ್ಕಿ ಬೆಲ್ಟರ್ ಎಂಬ ಮಹಿಳೆ ಅವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಆಲಾಪಕ್ಕೆ ಐವತ್ತು ಸಂಗೀತವೇ ಜಗತ್ತು: ಸಂಗೀತಾ ಕಟ್ಟಿ ಸಂದರ್ಶನ

ಹಿಂದೂಸ್ತಾನಿ ಸಂಗೀತ,  ಭಕ್ತಿಗೀತೆ, ಜನಪದಗೀತೆ, ಸಿನಿಮಾ ಸಂಗೀತ, ಸುಗಮ ಸಂಗೀತ, ವಚನಗಳು-ಹೀಗೆ ಎಲ್ಲದರಲ್ಲಿಯೂ ತಮ್ಮ ವಿಶಿಷ್ಟ ಗಾಯನದ ಮೂಲಕ ಛಾಪು ಮೂಡಿಸಿರುವವರು ಸಂಗೀತಾ ಕಟ್ಟಿ. ರಾಷ್ಟ್ರಪೇಮದ ದ್ಯೋತಕವಾಗಿರುವ ‘ವಂದೇಮಾತರಂ’ ಹಾಡಿಗೆ ಸ್ವರ ಸಂಯೋಜನೆ ಹಾಗೂ ಗಾಯನ ಮಾಡಿಯೂ ಸೈ ಅನಿಸಿಕೊಂಡಿದ್ದಾರೆ.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರಿನ ರಂಗಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸಿದ ರವೀಂದ್ರ ಕಲಾಕ್ಷೇತ್ರ

'ನಾಟಕ ನೋಡಲು ಸ್ಥಳವಿದೆಯೇ?’ ಈ ಪ್ರಶ್ನೆಗೆ ಇಂದು ಬೆಂಗಳೂರಿನ ರಂಗಭೂಮಿ ಪ್ರೇಮಿಗಳಿಗೆ ಸುಲಭವಾದ ಉತ್ತರವಿದೆ. ಆದರೆ, 1950ರ ದಶಕದಲ್ಲಿ ನಗರದಲ್ಲಿ ವ್ಯಾಪಕವಾಗುತ್ತಿದ್ದ ರಂಗಭೂಮಿ ಚಟುವಟಿಕೆಗಳಿಗೆ ಸೂಕ್ತ ವೇದಿಕೆ ಹುಡುಕುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಕರುನಾಡೋತ್ಸವ| ಕನ್ನಡಕ್ಕಾಗಿ ಹೋರಾಟ, ಹೋರಾಟಗಾರರ ಒಡನಾಟ: ರಾ.ನಂ. ಚಂದ್ರಶೇಖರ ಮಾತು

ಕರ್ನಾಟಕ ರಾಜ್ಯೋತ್ಸವದ ವಿಶೇಷವಾಗಿ ‘ಪ್ರಜಾವಾಣಿ’ ಹಮ್ಮಿಕೊಂಡಿರುವ ‘ಕರುನಾಡೋತ್ಸವ’ ಸರಣಿಯಲ್ಲಿ, ಕನ್ನಡಪರ ಹೋರಾಟಗಾರ ಮತ್ತು ಹಿರಿಯ ಲೇಖಕರಾದ ರಾ. ನಂ. ಚಂದ್ರಶೇಖರ ಅವರು ತಮ್ಮ ಹೋರಾಟದ ಬದುಕಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಕನ್ನಡ ಚಳವಳಿ, ಕನ್ನಡಪರ ಹೋರಾಟಗಾರರ ಜೊತೆಗಿನ ಒಡನಾಟ ಸೇರಿದಂತೆ ಹಲವು ಕುತೂಹಲಕಾರಿ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಪ್ರಜಾವಾಣಿ ಕರುನಾಡೋತ್ಸವ| ಗಡಿನಾಡ ಪರಂಪರೆಯ ‘ನಾಡೋಜ ಕಯ್ಯಾರ ಕಿಞ್ಞಣ್ಣ ರೈ’

ಕನ್ನಡ ಸಾಹಿತ್ಯ ಮತ್ತು ಗಡಿನಾಡ ಚಳುವಳಿಯ ಇತಿಹಾಸವನ್ನು ತೆರೆದು ನೋಡಿದರೆ, ನಮಗೆ ಅತ್ಯಂತ ಪ್ರಮುಖವಾಗಿ ಎದ್ದು ಕಾಣುವ ಹೆಸರು ನಾಡೋಜ ಕಯ್ಯಾರ ಕಿಞ್ಞಣ್ಣ ರೈ.

ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಮಹಾಕವಿ ಕುವೆಂಪು ರಸ್ತೆ: ಹಳೆ ಬೆಂಗಳೂರಿನ ನೆನಪು, ಹೊಸ ನಗರದ ಹೆಜ್ಜೆಗುರುತು

ನಾವು ಈಗ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹನೀಯರನ್ನು ನೆನೆಯುವುದು ನಮ್ಮ ಕರ್ತವ್ಯವಾಗಿದೆ. ಆ ಸಾಲಿನಲ್ಲಿ ಬರುವ ಪ್ತಮುಖರೆಂದರೆ, ರಾಷ್ಟ್ರಕವಿ ಕುವೆಂಪು. ರಾಜ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಅವರ ಹೆಸರನ್ನು ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಇಡಲಾಗಿದೆ.


ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ