ಬೆಂಗಳೂರು: ‘ರಾಜ್ಯ ಆದಿವಾಸಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಅನುದಾನ ನೀಡಬೇಕು’ ಎಂದು ರಾಜ್ಯ ಪಬ್ಲಿಕ್ ಪಲ್ಸ್ ಆರ್ಗನೈಸೇಷನ್ ಮುಖಂಡ ವಡ್ನಾಳ್ ಜಿ. ಅಂಜನ್‌ ಕುಮಾರ್ ಒತ್ತಾಯಿಸಿದ್ದಾರೆ.

‘ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬರುವ 50 ಬುಡಕಟ್ಟು ಸಮುದಾಯ ಗಳಲ್ಲಿ ಇರುಳ, ಸೋಲಿಗ, ಕುಡಿಯ, ಕಾಡುಕುರುಬ, ಜೇನುಕುರುಬ, ಬೆಟ್ಟಕುರುಬ, ಸಿದ್ಧಿ ಸೇರಿದಂತೆ 33 ಜಾತಿಗಳನ್ನು ಅತಿಸೂಕ್ಷ್ಮ ಜಾತಿ ಗಳೆಂದು ಗುರುತಿಸಿ ಪ್ರತ್ಯೇಕ ನಿಗಮ ಮಾಡಿರುವುದು ಸ್ವಾಗತಾರ್ಹ. ಆದರೆ, ನಿಗಮಕ್ಕೆ ₹33.36 ಕೋಟಿ ಮಾತ್ರ ಮಂಜೂರು ಮಾಡಿರುವುದು ತುಂಬಾ ಅನ್ಯಾಯ. ಈ ಸಮುದಾಯಗಳನ್ನು ಸಂವಿಧಾನದ ಪರಿಚ್ಛೇದ 9ರಲ್ಲಿ ಸೇರಿಸಿ ಶೇ 3ರಷ್ಟು ಮೀಸಲಾತಿ ನೀಡಲಾಗಿದೆ. ಹೀಗಾಗಿ, ರಾಜ್ಯ ಬಜೆಟ್‌ನಲ್ಲಿ ನಿಗಮಕ್ಕೆ ₹125 ಕೋಟಿ ಮೀಸಲಿಡಬೇಕು’ ಎಂದು ಆಗ್ರಹಿಸಿದ್ದಾರೆ.

261101-4-1568636820