ಬೆಂಗಳೂರು: ‘ಎಸ್‌ಐಆರ್‌ ಕುರಿತು ಯುವ ಸಮುದಾಯಕ್ಕೆ ಮಾಹಿತಿ ನೀಡಿ, ಕಾಂಗ್ರೆಸ್‌ನ ಅರಾಜಕತೆಯ ಮನಃಸ್ಥಿತಿಯನ್ನು ಬಯಲು ಮಾಡಲು ನ. 1ರಿಂದ 30ರವರೆಗೆ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‍ಐಆರ್ ವಿಚಾರದಲ್ಲಿ ಯುವಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಯುವ ಸಮುದಾಯಕ್ಕೆ ಸತ್ಯಾಂಶ ಮನವರಿಕೆ ಮಾಡಿಕೊಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಂವಾದ ಗೋಷ್ಠಿಗಳನ್ನು ಆಯೋಜಿಸ ಲಾಗುವುದು. ನ. 3ರಂದು ಹುಬ್ಬಳ್ಳಿ, 5ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯದೆಲ್ಲೆಡೆ ವಿವಿಧ ಹಂತ ಗಳಲ್ಲಿ ಕಾಲೇಜುಗಳಲ್ಲಿ ಕಾರ್ಯಕ್ರಮ ಗಳನ್ನು ನಡೆಸಲಾಗುವುದು’ ಎಂದರು.

ರಾಹುಲ್‌ ಗಾಂಧಿ ಅವರಿಗೆ ಮಾತ್ರ ಎಸ್‍ಐಆರ್‌ ಸರಿ ಕಾಣುತ್ತಿಲ್ಲ. ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ರಾಹುಲ್‌ಗೆ ಗೊತ್ತಾದರೆ ಅವರ ರಾಜಕೀಯಕ್ಕೂ ಧಕ್ಕೆ ಆಗಬಹುದು, ರಾಜಣ್ಣನ ಪರಿಸ್ಥಿತಿ ಅವರಿಗೂ ಬರಬಹುದು ವಿ.ಸುನಿಲ್‌ ಕುಮಾರ್, ಬಿಜೆಪಿ ಶಾಸಕ