ದೀಪಾವಳಿ ಹಬ್ಬಕ್ಕೆ ನಿಮ್ಮ ಮನೆ ಮಹಾಲಕ್ಷ್ಮಿಗೆ ಸ್ಪೆಷಲ್ ಗಿಫ್ಟ್
ಧನತೇರಸ್ ಅನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಧನತೇರಸ್ ದಿನದಂದು ಹೊಸ ವಸ್ತುಗಳನ್ನು ಖರೀದಿಸುವುದು ಶುಭಕರ. ವಿಶೇಷವಾಗಿ ಚಿನ್ನ, ಬೆಳ್ಳಿ, ಹಿತ್ತಾಳೆ ಅಥವಾ ಉಕ್ಕಿನ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವಿದೆ. ಇದರ ಜೊತೆಗೆ ಮನೆಗೆ ಬೇಕಾದ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ವಾಹನಗಳನ್ನೂ ಖರೀದಿಸಬಹುದು. ನಿಮ್ಮ ಮನೆಯ ಮಹಾಲಕ್ಷ್ಮಿಯರಾದ ಅಮ್ಮ, ಪತ್ನಿ, ಸಹೋದರಿ ಅಥವಾ ಮಗಳಿಗೆ ದೀಪಾವಳಿ ಸಂದರ್ಭದಲ್ಲಿ ವಿಶೇಷ ಉಡುಗೊರೆ ನೀಡಲು ಬಯಸಿದರೆ, ಇಲ್ಲಿವೆ ನಿಮಗಾಗಿ 5 ಗಿಫ್ಟ್ ಐಡಿಯಾಗಳು.
ಸುಂದರವಾದ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಿ
ಧನತೇರಸ್ ಸಂದರ್ಭದಲ್ಲಿ ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸಬಹುದು. ಈ ದಿನ ಪ್ಲಾಸ್ಟಿಕ್ ಅಥವಾ ಗಾಜಿನ ಪಾತ್ರೆಗಳನ್ನು ಖರೀದಿಸುವುದನ್ನು ತಪ್ಪಿಸುವುದು ಒಳ್ಳೆಯದು ಎಂಬ ನಂಬಿಕೆಯಿದೆ. ಹಾಗೆಯೇ ತರಕಾರಿ ಕತ್ತರಿಸಲು ಬಳಸುವ ಚಾಕು ಅಥವಾ ಇತರ ವಸ್ತುಗಳನ್ನು ಖರೀದಿಸದಿರುವುದು ಉತ್ತಮ. ಬದಲಿಗೆ ಬಟ್ಟಲು, ತಟ್ಟೆ, ಲೋಟ ಅಥವಾ ಚಮಚಗಳಂತಹ ಪಾತ್ರೆಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡಬಹುದು.
ಚಿನ್ನ ಅಥವಾ ಬೆಳ್ಳಿಯ ಆಭರಣಗಳು
ನಿಮ್ಮ ತಾಯಿ, ಪತ್ನಿ ಅಥವಾ ಸಹೋದರಿಗೆ ದೀಪಾವಳಿ ಉಡುಗೊರೆಯಾಗಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ನೀಡಬಹುದು. ಮೂಗುತಿ, ಸಣ್ಣ ಮೂಗಿನ ಒಡವೆ ಅಥವಾ ಕತ್ತಿನ ಸರ ಹೀಗೆ ಹಲವು ಆಯ್ಕೆಗಳಿವೆ. ನಿಮ್ಮ ಬಜೆಟ್ಗೆ ಅನುಗುಣವಾಗಿ ಸುಂದರವಾದ ಆಭರಣವನ್ನು ಆಯ್ಕೆ ಮಾಡಿ ಉಡುಗೊರೆಯಾಗಿ ನೀಡಬಹುದು.
ಗೃಹೋಪಯೋಗಿ ಉಪಕರಣಗಳು ಅಥವಾ ಗ್ಯಾಜೆಟ್ಗಳು
ಧನತೇರಸ್ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಗ್ಯಾಜೆಟ್ಗಳನ್ನು ಖರೀದಿಸುವುದು ಕೂಡ ಒಳ್ಳೆಯ ಆಯ್ಕೆಯಾಗಿದೆ. ಫ್ರಿಡ್ಜ್, ಟಿವಿ, ಸ್ಮಾರ್ಟ್ಫೋನ್, ಮಿಕ್ಸರ್ ಸೇರಿದಂತೆ ಮನೆಯ ದಿನನಿತ್ಯದ ಬಳಕೆಗೆ ಅನುಕೂಲವಾಗುವ ಉಪಕರಣಗಳನ್ನು ಖರೀದಿಸಬಹುದು. ಇವು ನಿಮ್ಮ ಮನೆಯ ಮಹಿಳೆಯರಿಗೆ ಉಪಯುಕ್ತ ಉಡುಗೊರೆಗಳಾಗಬಹುದು.
ಬೆಳ್ಳಿ ಅಥವಾ ಚಿನ್ನದ ಕೀಚೈನ್
ನಿಮ್ಮ ಮನೆಯ ಮಹಿಳೆಯರಿಗೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಕೀಚೈನ್ಗಳನ್ನು ಉಡುಗೊರೆಯಾಗಿ ನೀಡಬಹುದು. ಮನೆಯ ಕೀಲಿ ಅಥವಾ ಲಾಕರ್ನ ಕೀಲಿಗಳನ್ನು ಇಂತಹ ಸುಂದರ ಕೀಚೈನ್ಗೆ ಜೋಡಿಸಿಟ್ಟುಕೊಳ್ಳಬಹುದು. ಚಿಕ್ಕದಾದರೂ ಆಕರ್ಷಕ ಮತ್ತು ಉಪಯುಕ್ತ ಉಡುಗೊರೆ ಇದಾಗಿರುತ್ತದೆ.
ದೇವರ ಮೂರ್ತಿ ಅಥವಾ ಬೆಳ್ಳಿ ನಾಣ್ಯ
ಧನತೇರಸ್ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ದೇವರ ಮೂರ್ತಿಗಳನ್ನು ಖರೀದಿಸಬಹುದು. ಇವುಗಳನ್ನು ಮನೆಯ ಪೂಜಾ ಕೋಣೆಯಲ್ಲಿ ಇರಿಸಬಹುದು. ಅಲ್ಲದೆ, ದೀಪಾವಳಿ ಪೂಜೆಯ ಸಂದರ್ಭದಲ್ಲಿ ಬಳಸಲು ಬೆಳ್ಳಿ ನಾಣ್ಯಗಳನ್ನು ಕೂಡ ಖರೀದಿಸಬಹುದು. ಇಂತಹ ಉಡುಗೊರೆಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತವೆ.

