ಧಾರವಾಡ, ನ.17: ಸಾಮಾನ್ಯವಾಗಿ 2 ರಿಂದ 3 ಗಂಟೆಗಳಲ್ಲಿ ಕರಗಿ ಹೋಗಬೇಕಾದ ಬೆಣ್ಣೆಯು ಧಾರವಾಡದ ಸಾಯಿ ನಗರದ ಕೃಷಿ ನಗರದಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ 17 ದಿನಗಳಾದರೂ ಇನ್ನೂ ಕರಗಿಲ್ಲ. ಭಕ್ತರಲ್ಲಿ ಅಚ್ಚರಿ ಮೂಡಿಸಿರುವ ಈ ಘಟನೆ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಅಕ್ಟೋಬರ್ 31 ರಂದು ವೀರಾ೦ಜನೇಯ ಸ್ವಾಮಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಈ ಅಲಂಕಾರದಲ್ಲಿ ಬೆಣ್ಣೆ ಮತ್ತು ವಿವಿಧ ಡ್ರೈ ಫ್ರೂಟ್ಗಳನ್ನು ಬಳಸಲಾಗಿತ್ತು. ಆ ದಿನದಿಂದ ಇಂದಿನವರೆಗೆ 17 ದಿನಗಳು ಕಳೆದಿದ್ದರೂ, ಆಂಜನೇಯನ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆಯು ಯಾವುದೇ ಬದಲಾವಣೆ ಇಲ್ಲದೆ ಹಾಗೆಯೇ ಉಳಿದಿದೆ. ಇದು ದೇವರ ಪವಾಡ ಎಂದು ಭಕ್ತರು ನಂಬಿದ್ದಾರೆ. ಇಂತಹ ಘಟನೆಗಳು ವಿರಳವಾಗಿದ್ದು, ಭಕ್ತರು ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಘಟನೆಯು ದೈವಿಕ ಶಕ್ತಿಯ ಪ್ರತೀಕ ಎಂದು ಸ್ಥಳೀಯರು ಭಾವಿಸಿದ್ದಾರೆ. ಬೆಣ್ಣೆ ಕರಗದೇ ಇರುವುದು ದೇವಸ್ಥಾನದ ಇತಿಹಾಸದಲ್ಲಿ ಒಂದು ವಿಶಿಷ್ಟ ಘಟನೆಯಾಗಿ ದಾಖಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

