ನವದೆಹಲಿ: ಹೆಲ್ಮೆಟ್ ಜೀವ ರಕ್ಷಕ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯವಾಗಿದೆ. ಅನೇಕರು ತಮ್ಮ ಜೀವ ಉಳಿಸಿಕೊಳ್ಳಲು ಮತ್ತು ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ತಪ್ಪಿಸಿಕೊಳ್ಳಲು ಹೆಲ್ಮೆಟ್ ಬಳಸುತ್ತಾರೆ. ಇನ್ನು, ಕೆಲವರಿಗೆ ಹೆಲ್ಮೆಟ್ ಬಳಸುವ ಅಭ್ಯಾಸವೇ ಇಲ್ಲ. ನಿಮಗೆ ಗೊತ್ತಾ? ಒಂದು ಹೆಲ್ಮೆಟ್ ಅನ್ನು ಎಷ್ಟು ವರ್ಷಗಳವರೆಗೆ ಬಳಸಬಹುದು ಎಂದು? ಹಾಗಿದ್ದರೆ ಹೆಲ್ಮೆಟ್ಗೆ ಜೀವಿತಾವಧಿ ಇದೆಯಾ? ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..
ಅನೇಕರು ಹೆಲ್ಮೆಟ್ ಸಂಪೂರ್ಣವಾಗಿ ಒಡೆಯುವವರೆಗೆ ಅಥವಾ ಅದರ ಗಾಜು ಹಾನಿ ಆಗುವವರೆಗೆ ಬಳಸುತ್ತಾರೆ. ಆದರೆ ಆಟೋಮೊಬೈಲ್ ಸುರಕ್ಷತಾ ತಜ್ಞರು ಮತ್ತು ಪ್ರಮುಖ ಹೆಲ್ಮೆಟ್ ಉತ್ಪಾದನಾ ಕಂಪನಿಗಳ ಪ್ರಕಾರ ಇದು ತಪ್ಪು. ನಮ್ಮ ಔಷಧಿಗಳು ಮತ್ತು ಆಹಾರ ಪದಾರ್ಥಗಳಂತೆ ಹೆಲ್ಮೆಟ್ಗಳು ಸಹ ಒಂದು ನಿರ್ದಿಷ್ಟ ಜೀವಿತಾವಧಿ ಹೊಂದಿರುತ್ತವೆ. ನಂತರ ಅವು ನಮ್ಮ ತಲೆಗೆ ರಕ್ಷಣೆ ನೀಡುವಲ್ಲಿ ವಿಫಲ ಆಗುತ್ತವೆ ಎನ್ನುತ್ತಾರೆ.
ಎಕ್ಸ್ಪೈರಿ ಡೇಟ್ ಏನು?
ಅರೈ, ಶೋಯಿ, ಶಾರ್ಕ್ ಮತ್ತು ಸ್ನೆಲ್ ಫೌಂಡೇಶನ್ನಂತಹ ಹೆಲ್ಮೆಟ್ ತಯಾರಕರ ಸುರಕ್ಷತಾ ಮಾನದಂಡಗಳ ಪ್ರಕಾರ.. ಹೆಲ್ಮೆಟ್ ಬಳಸಿದ ದಿನಾಂಕದಿಂದ 3 ರಿಂದ 5 ವರ್ಷಗಳ ಒಳಗೆ ಬದಲಾಯಿಸಬೇಕು. ಭಾರತದಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ನ ISI ಗುರುತು ಹೊಂದಿರುವ ಹೆಲ್ಮೆಟ್ಗಳು ಸಿಗುತ್ತವೆ. ಆದರೆ ಅದರಲ್ಲಿ ಎಲ್ಲಿಯೂ ಕಾನೂನುಬದ್ಧವಾಗಿ ಅದರ ಜೀವಿತಾವಧಿಯ ದಿನಾಂಕ ಇರೋದಿಲ್ಲ. ಆದರೆ ಹೆಲ್ಮೆಟ್ಗೆ ಬಳಸುವ ವಸ್ತುಗಳಿಗೆ ಎಕ್ಸಪೈರಿ ಡೇಟ್ ಇರುತ್ತದೆ. ಅಂದರೆ ನೀವು ಪ್ರತಿದಿನ ಹೆಚ್ಚು ದೂರ ಪ್ರಯಾಣಿಸಿದರೆ.. ನಿಮ್ಮ ಹೆಲ್ಮೆಟ್ ಬೆವರು, ಧೂಳು ಮತ್ತು ಸೂರ್ಯನ ಬೆಳಕಿನಿಂದಾಗಿ 2 ರಿಂದ 3 ವರ್ಷಗಳಲ್ಲಿ ಬಾಳಿಕೆ ಕಳೆದುಕೊಳ್ಳುತ್ತದೆ.
ಹೆಲ್ಮೆಟ್ ಹೇಗೆ ಹಾಳಾಗುತ್ತದೆ?
ಹೆಲ್ಮೆಟ್ನ ಗಟ್ಟಿಯಾದ ಹೊರ ಕವಚದ ಕೆಳಗೆ ಥರ್ಮೋಕೋಲ್ ಹೋಲುವ ವಿಶೇಷ ಬಿಳಿ ರಕ್ಷಣಾತ್ಮಕ ಫೋಮ್ ಇರುತ್ತದೆ. ಇದನ್ನು ಇಪಿಎಸ್ ಲೈನರ್ ಎಂದು ಕರೆಯುತ್ತಾರೆ. ಇದು ಅಪಘಾತಗಳು ಸಂಭವಿಸಿದಾಗ ನಮಗೆ ರಕ್ಷಣೆ ನೀಡುತ್ತದೆ. ಆದರೆ ಅದಕ್ಕೆ ವಯಸ್ಸಾದಂತೆ ಫೋಮ್ ಗಟ್ಟಿಯಾಗುತ್ತದೆ. ನಮ್ಮ ಬೆವರಿನಲ್ಲಿರುವ ಆಮ್ಲಗಳು, ಕೂದಲಿನ ಎಣ್ಣೆಗಳು, ಸೂರ್ಯನ ಬೆಳಕಿನಿಂದಾಗಿ ಶಕ್ತಿ ಕಳೆದುಕೊಳ್ಳುತ್ತದೆ.
ಹೆಲ್ಮೆಟ್ ಬಳಸದಿದ್ರೆ ಏನಾಗುತ್ತದೆ?
ನಮ್ಮಲ್ಲಿ ಇನ್ನೂ ಕೆಲವು ತಪ್ಪು ಗೃಹಿಕೆಗಳು ಇವೆ. ಮನೆಯಲ್ಲಿ ಬಳಸದೇ ಹಾಗೆಯೇ ಇಟ್ಟರೆ ಹೆಲ್ಮೆಟ್ ಸುರಕ್ಷಿತವಾಗಿರುತ್ತದೆ ಎಂದು ಕೊಳ್ಳುತ್ತಾರೆ. ಹೆಲ್ಮೆಟ್ ತಯಾರಕರ ನಿಯಮಗಳ ಪ್ರಕಾರ.. ಹೆಲ್ಮೆಟ್ ಕೂಡ ತಯಾರಾದ ದಿನಾಂಕದಿಂದ 5 ರಿಂದ 7 ವರ್ಷಗಳವರೆಗೆ ಶೆಲ್ಫ್ ಜೀವಿತಾವಧಿ ಹೊಂದಿರುತ್ತದೆ ಎಂದು ಹೇಳುತ್ತವೆ. ನೀವು ಮನೆಯಲ್ಲಿ ಒಂದೇ ಕಡೆ ಸಂಗ್ರಹಿಸಿಟ್ಟರೂ ಗಾಳಿಯ ಆರ್ದ್ರತೆ ಮತ್ತು ತಾಪಮಾನದ ಬದಲಾವಣೆಗಳಿಂದಾಗಿ ಹೆಲ್ಮೆಟ್ನ ಪ್ಯಾಡ್ಗಳು ಮತ್ತು ಅಂಟುಗಳು ದುರ್ಬಲಗೊಳ್ಳಲು ಪ್ರಾರಂಭ ಆಗುತ್ತವೆ. ಹೆಲ್ಮೆಟ್ನ ಗಲ್ಲದ ಪಟ್ಟಿಯ ಮೇಲೆ ಲೇಬಲ್ ಕೆಳಗೆ ಅಂಟಿಸಲಾದ ಸ್ಟಿಕ್ಕರ್ ಪರಿಶೀಲಿಸುವ ಮೂಲಕ ನೀವು ನಿಮ್ಮ ಹೆಲ್ಮೆಟ್ನ ಉತ್ಪಾದನಾ ದಿನಾಂಕವನ್ನು ಕಂಡುಕೊಳ್ಳಿ. ಪರಿಶೀಲಿಸಬಹುದು.
ಹಾಗಾಗಿ ನಾವು ಐದು ವರ್ಷಗಳ ಗಡಿ ದಾಟುವ ಮೊದಲೇ ಹೊಸ ಹೆಲ್ಮೆಟ್ಗೆ ಶಿಫ್ಟ್ ಆಗಬೇಕು. ಒಮ್ಮೆ ಅಪಘಾತಕ್ಕೆ ಒಳಗಾದರೆ, ಎತ್ತರದಿಂದ ಕಾಂಕ್ರಿಟ್ ನೆಲದ ಮೇಲೆ ಬಿದ್ದರೆ ಅಂದಿನಿಂದ ಅದನ್ನು ಬಳಸಬಾರದು. .

