ಅಂಡರ್-19 ಏಷ್ಯಾ ಕಪ್ ಕ್ರಿಕೆಟ್. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟದ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಒಂದು ವಿಕೆಟ್ ನಿಂದ ಸೋಲಿಸಿ ಒಂಭತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದುಕೊಂಡು ಬೆನ್ನಲ್ಲೇ ಇಂದು ಮತ್ತೆ ಭಾರತ ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಅಂಡರ್-19 ಏಷ್ಯಾ ಕಪ್ ಕ್ರಿಕೆಟ್. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟದ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಒಂದು ವಿಕೆಟ್ ನಿಂದ ಬಗ್ಗು ಬಡಿಯುವ ಮೂಲಕ ಭಾರತ ಒಂಭತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದುಕೊಂಡು ಬೀಗಿತು. ಈ ಗೆಲುವಿಗಾಗಿ ಇಡೀ ದೇಶ ಸಂಭ್ರಮಿಸಿತು. ಆ ಕುರಿತು ಇನ್ನೂ ಚರ್ಚೆ ನಡೆಯುತ್ತಿರುವಾಗ ಇದೀಗ ಮತ್ತೆ ಭಾರತ ಪಾಕಿಸ್ತಾನ ಇಂದು ಮುಖಾಮುಖಿಯಾಗಲಿವೆ. ಆದರೆ ಈ ಬಾರಿ ಕ್ರಿಕೆಟ್ ಅಲ್ಲ ಫುಟ್ಬಾಲ್!
ಹೌದು. ಇಂದು(ಮಂಗಳವಾರ) ಸ್ಯಾಫ್ ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಿ(SAFF Championship Football Tournament)ಯ ಫೈನಲ್ ಪಂದ್ಯ ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಸೆಣಸಾಡಲಿದೆ. ಈ ಪಂದ್ಯವೂ ಕೂಡ ರೋಚಕವಾಗಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ವಿಶೇಷ ಎಂದರೆ ಕ್ರಿಕೆಟ್‌ನಲ್ಲಿ ಭಾರತ ಒಂಬತ್ತನೇ ಬಾರಿ ಏಷ್ಯಾಕಪ್ ಗೆದ್ದುಕೊಂಡರೆ, ಫುಟ್ಬಾಲ್‌ನಲ್ಲೂ ಹಾಲಿ ಚಾಂಪಿಯನ್ ಭಾರತ ತಂಡ ದಾಖಲೆಯ 10ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ!
ಇನ್ನು ಇದೇ ಮೊದಲ ಬಾರಿಗೆ ಫೈನಲ್‌ಗೆ ಬಂದಿರುವ ಪಾಕ್ ತಂಡ ಚೊಚ್ಚಲ ಟ್ರೋಫಿ ಗೆಲ್ಲಲು ಹೋರಾಡಲಿದೆ. ಭಾರತ ಈ ಹಿಂದೆ 1993, 1997, 1999, 2005, 2009, 2011, 2015, 2021 ಮತ್ತು 2023ರಲ್ಲಿ ಚಾಂಪಿಯನ್ ಆಗಿತ್ತು. ಈ ಬಾರಿ ಟೂರ್ನಿಯ ಗುಂಪು ಹಂತದ 2 ಪಂದ್ಯಗಳಲ್ಲೂ ಭಾರತ ಗೆದ್ದಿದೆ.
ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು 3-2 ಗೋಲುಗಳಿಂದ ಸೋಲಿಸಿದ್ದ ಭಾರತ, ಬಳಿಕ ಮಾಲ್ಡೀವ್ಸ್ ವಿರುದ್ಧ 1-0 ಜಯಗಳಿಸಿತ್ತು. ಸೆಮಿಫೈನಲ್‌ನಲ್ಲಿ ಭೂತಾನ್ ವಿರುದ್ಧ 2-1ರಲ್ಲಿ ಗೆದ್ದಿತ್ತು. ಅತ್ತ ಪಾಕ್ ತಂಡ ಸೆಮೀಸ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿತ್ತು.
ಭಾರತ vs ಪಾಕಿಸ್ತಾನ SAFF ಚಾಂಪಿಯನ್‌ಶಿಪ್ 2026 ಫೈನಲ್ ಪಂದ್ಯವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. ಇಂದಿನ. IND vs PAK ಫುಟ್‌ಬಾಲ್ ಪಂದ್ಯ ಸಮಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ.

