ಬೆಂಗಳೂರು, ನವೆಂಬರ್​​ 12: ದೀಪಾವಳಿ ಮುಗಿದರೂ ಪಟಾಕಿ ಅವಾಂತರ ನಿಲ್ಲುತ್ತಿಲ್ಲ. ಅವಘಡಗಳಿಂದ ನಿತ್ಯ ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಪಟಾಕಿಯಿಂದ ಗಾಯಗೊಂಡವರ ಗೋಳಾಟ ಒಂದು ಕಡೆ ಆದರೆ, ಪಟಾಕಿ ಎಬ್ಬಿಸಿದ ಹೊಗೆ ಜನರ ಉಸಿರಿಗೂ ಕಂಟಕವಾಗಿದೆ. ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಮಿತಿ ಮೀರಿದೆ. ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 173ರ ಗಡಿ ದಾಟಿದೆ.

ಬೆಂಗಳೂರಿನ ಯಾವ ಪ್ರದೇಶದಲ್ಲಿ ಎಷ್ಟಿದೆ AQI?

PM2.5 ಮತ್ತು PM10 ನಂತಹ ಮಾಲಿನ್ಯಕಾರಕಗಳ ಹೆಚ್ಚಳದಿಂದಾಗಿ ಸಿಲಿಕಾನ್​ ಸಿಟಿಯಲ್ಲಿ AQI 173 ಕ್ಕೆ ತಲುಪಿದೆ. ಇನ್ನು ರಾಮನಗರದಲ್ಲಿ ಅತಿ ಹೆಚ್ಚು 178 AQI, ಕಸವನಹಳ್ಳಿಯಲ್ಲಿ 175, ವರ್ತೂರುರಲ್ಲಿ 172, ವಾಯು ಗುಣಮಟ್ಟ ಸೂಚ್ಯಂಕ ಕಂಡುಬಂದಿದೆ.

ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟದ ವಿವರ ಹೀಗಿದೆ

ಇನ್ನು ರಾಜ್ಯದ ಪ್ರಮುಖ ನಗರಗಳ ವಾಯು ಗುಣಮಟ್ಟ ನೋಡುವುದಾರೆ, ಮೈಸೂರಿನಲ್ಲಿ 157, ಹುಬ್ಬಳ್ಳಿಯಲ್ಲಿ 120, ಮಂಗಳೂರಿನಲ್ಲಿ 107, ಬೆಳಗಾವಿಯಲ್ಲಿ 128, ಕಲಬುರಗಿಯಲ್ಲಿ 163, ವಿಜಯಪುರದಲ್ಲಿ 146, ಬಳ್ಳಾರಿಯಲ್ಲಿ 156, ಶಿವಮೊಗ್ಗದಲ್ಲಿ 142, ತುಮಕೂರಿನಲ್ಲಿ 178, ಉಡುಪಿಯಲ್ಲಿ 153 ವಾಯು ಗುಣಮಟ್ಟ ಸೂಚ್ಯಂಕ ಕಂಡುಬಂದಿದೆ.

LIVE TV

ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ನೆರಡು ದಿನ ಒಣ ಹವೆ, ಚಳಿಯ ವಾತಾವರಣ: ಧಾರವಾಡದಲ್ಲಿ 12.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ

ಈ ಅಂಕಿಅಂಶಗಳ ಪ್ರಕಾರ ಬೆಂಗಳೂರು, ಮೈಸೂರು ಮತ್ತು ತುಮಕೂರು ನಗರಗಳಲ್ಲಿ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿದ್ದು, ಬೆಳಗಾವಿಯಲ್ಲಿ ಕಳವಳಕಾರಿ ಮಟ್ಟದಲ್ಲಿದೆ. ಉಳಿದ ನಗರಗಳಲ್ಲಿ ವಾಯು ಗುಣಮಟ್ಟ ಮಧ್ಯಮ ಮಟ್ಟದಲ್ಲಿದೆ. ಅನಾರೋಗ್ಯಕರ ಗಾಳಿಯಿಂದ ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.

ಹೊರಗಡೆ ಓಡಾಡದಂತೆ ಎಚ್ಚರಿಕೆ 

ಅನಗತ್ಯ ಹೊರಗಡೆ ಓಡಾಟ ಮತ್ತು  ವ್ಯಾಯಾಮ ಬೇರೆಡೆಗೆ ಸಂಚಾರವನ್ನು ಕಡಿಮೆ ಮಾಡುವುದು ಸೂಕ್ತವಾಗಿದೆ. ಅಗತ್ಯವಿದ್ದಲ್ಲಿ ಸೂಕ್ತ ಮಾಸ್ಕ್ ಬಳಸುವುದು ಉತ್ತಮ. ಪಟಾಕಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ ಕುಸಿದಿರುವುದು ಪರಿಸರ ಸಂರಕ್ಷಣೆಯ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.