ಚೆನ್ನೈ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್‌ ತಂಡದ ಸಿಇಒ ಕಾವ್ಯಾ ಮಾರನ್‌ ಹಾಗೂ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಮದುವೆಯಲ್ಲಿ ಭಾಗಿಯಾಗಲು ಸೂಪರ್‌ಸ್ಟಾರ್‌ ರಜನಿಕಾಂತ್‌ ಹಾಗೂ ತಮಿಳುನಾಡಿದ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್‌ ಅವರು ಪರಿವಾರ ಸಮೇತರಾಗಿ ಗ್ರೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಚೆನ್ನೈ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್‌ ತಂಡದ ಸಿಇಒ ಕಾವ್ಯಾ ಮಾರನ್‌ ಹಾಗೂ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಮದುವೆಯಲ್ಲಿ ಭಾಗಿಯಾಗಲು ಸೂಪರ್‌ಸ್ಟಾರ್‌ ರಜನಿಕಾಂತ್‌ ಹಾಗೂ ತಮಿಳುನಾಡಿದ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್‌ ಅವರು ಪರಿವಾರ ಸಮೇತರಾಗಿ ಗ್ರೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ.

✈️ Anirudh Wedding https://t.co/GlkEShgao4

— Christopher Kanagaraj (@Chrissuccess) November 9, 2026

ಅನಿರುದ್ಧ್ ಅವರು ರಜನಿಕಾಂತ್‌ರ ಸೋದರಳಿಯ. ಅತ್ತ ಕಾವ್ಯಾ, ಸ್ಟಾಲಿನ್‌ರ ಸೋದರಸಂಬಂಧಿ ಆಗಿದ್ದು, ಸನ್‌ ಗ್ರೂಪ್‌ನ ಮುಖ್ಯಸ್ಥ ಕಲಾನಿಧಿ ಮಾರನ್‌ ಅವರ ಪುತ್ರಿ.

Maapillai veedu - Thalaivar off to Greece to #Anirudh wedding❤️‍ https://t.co/J7woyMa0La

— Vikki | #CinemaMeter (@CinemaMeterOff) November 9, 2026

ನ.10 ಮತ್ತು 11ರಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಸ್ಟಾಲಿನ್‌, ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್‌, ರಜನೀಕಾಂತ್‌, ಅವರ ಪುತ್ರಿ ಐಶ್ವರ್ಯಾ, ಮೊದಲಾದವರು ಹೊರಟಿದ್ದು, ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕಂಡುಬಂದರು. ನ.21ರಂದು ಚೆನ್ನೈನಲ್ಲಿ ರಿಸೆಪ್ಷನ್‌ ನಡೆಯಲಿದೆ.

ವಿವಾಹ ಮಹೋತ್ಸವದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಈ ನಡುವೆ ನೀಲಿ ಬಣ್ಣದಲ್ಲಿ ವಿನ್ಯಾಸಗೊಳಿಸಿರುವ ದಂಪತಿಗಳ ಆಮಂತ್ರಣ ಪೆಟ್ಟಿಗೆಯೂ ಎಲ್ಲರ ಗಮನ ಸೆಳೆದಿದೆ.. ಸ್ವಾಗತ ಆಮಂತ್ರಣ ಪತ್ರಿಕೆ(Welcome Invitation Card)ಗಳಲ್ಲಿ ಕೆಲಸ ಮಾಡಿದ ವಿನ್ಯಾಸಕಿ ರಂಜಿನಿ ಅಯ್ಯಂಗಾರ್, ಮಿಡ್-ಡೇ ಜೊತೆ ಈ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ, ಅನಿರುದ್ಧ್ ಮತ್ತು ಕಾವ್ಯಾ ವೈಯಕ್ತಿಕವಾಗಿ ವಿನ್ಯಾಸದಲ್ಲಿ ಭಾಗಿಯಾಗಿದ್ದಾರೆ ಎಂದು ಬಹಿರಂಗಪಡಿಸಿದರು.

Anirudh marriagekaga greece kelambitan thathi..tamilnadu marriage couples escape agitanga anirudh maatikitan https://t.co/YJl1FG5bGR

— சுள்ளான் சின்ன தத்தி ⚔️ (@Bottleku10_ruva) November 9, 2026

ಈ ಆರತಕ್ಷತೆ ಸಮಾರಂಭದಲ್ಲಿ ಮನರಂಜನೆ, ಕ್ರಿಕೆಟ್, ಬ್ಯುಸಿನೆಸ್‌ಮೆನ್‌ ಅಷ್ಟೇ ಅಲ್ಲದೆ ರಾಜಕೀಯ ಜಗತ್ತಿನ ಹಲವು ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮತ್ತು ಹಲವಾರು ಪ್ರಮುಖ ಚಲನಚಿತ್ರ ವ್ಯಕ್ತಿಗಳಿಗೂ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.