ಯಶ್‌ ಅವರಿಗೆ ಪೌರಾಣಿಕ ಅಥವಾ ಐತಿಹಾಸಿಕ ಪಾತ್ರಗಳು ಅತ್ಯಂತ ಸೂಕ್ತ ಎಂದು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಹಿಂದೆ ವ್ಯಕ್ತಪಡಿಸಿದ್ದ ಮಾತುಗಳು ಈಗ ಸಂಪೂರ್ಣ ನಿಜವಾಗಿವೆ. ‘ರಾಕಿಂಗ್ ಸ್ಟಾರ್’ ಯಶ್ ಅವರು ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ‘ರಾವಣ’ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಈ ನಟನೆಗೆ ಪ್ರೇಕ್ಷಕರಿಂದ ಮತ್ತು ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಬದುಕಿದ್ದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುವಾಗ, ಯಶ್ ಅವರ ಮೈಕಟ್ಟು, ಇಮೇಜ್ ಮತ್ತು ತಾಂತ್ರಿಕ ಬೆಳವಣಿಗೆಗೆ ಮೈಥಾಲಾಜಿಕಲ್ ಅಥವಾ ಹಿಸ್ಟಾರಿಕಲ್ ಕ್ಯಾರೆಕ್ಟರ್‌ಗಳು (ಪೌರಾಣಿಕ ಅಥವಾ ಐತಿಹಾಸಿಕ ಪಾತ್ರಗಳು) ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟಿದ್ದರು. ಇಂದಿನ ಜನರ ಒಪ್ಪಿಗೆ ಮತ್ತು ತಾಂತ್ರಿಕ ಗುಣಮಟ್ಟಕ್ಕೆ ತಕ್ಕಂತೆ ಅಂತಹ ಪಾತ್ರಗಳಲ್ಲಿ ಯಶ್ ತುಂಬಾ ಚೆನ್ನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಪುನೀತ್ ಅವರ ಆ ದೂರದೃಷ್ಟಿಯ ಮಾತುಗಳು ಇಂದು ಅಕ್ಷರಶಃ ಸತ್ಯವಾಗಿ ಸಾಕಾರಗೊಂಡಿವೆ.

ಬಾಲಿವುಡ್‌ನ ಪ್ರತಿಷ್ಠಿತ ನಿರ್ದೇಶಕ ನಿತೀಶ್ ತಿವಾರಿ ತೆರೆಗೆ ತರುತ್ತಿರುವ ಬ್ರಹ್ಮಾಂಡ ಚಿತ್ರವಾದ ‘ರಾಮಾಯಣ’ದಲ್ಲಿ ಯಶ್ ಅವರು ಲಂಕಾದೀಪದ ಪ್ರಬಲ ಹಾಗೂ ಪ್ರಭಾವಶಾಲಿ ದೊರೆ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ. ಕೇವಲ ಹೀರೋ ಪಾತ್ರಗಳಷ್ಟೇ ಅಲ್ಲದೆ, ಅಷ್ಟೇ ತೂಕದ ನೆಗೆಟಿವ್ ಹಾಗೂ ಪೌರಾಣಿಕ ಶಕ್ತಿಯುಳ್ಳ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿರುವುದು ಅವರ ನಟನಾ ವ್ಯಾಪ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

View this post on Instagram

A post shared by 𝓓𝓱𝓐𝓷𝓾𝓼𝓱✨😎 (@smile_boy_dhanush68225)

ರಾವಣನ ಪಾತ್ರಕ್ಕೆ ಜೀವತುಂಬಿರುವ ಯಶ್ ಅವರ ಹಾವ-ಭಾವ, ಗಂಭೀರ ಧ್ವನಿ ಮತ್ತು ಅಟ್ಟಹಾಸದ ಲುಕ್‌ಗಳು ಸಿನಿಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿವೆ. ತೆರೆಯ ಮೇಲೆ ರಾವಣನ ಪಾತ್ರಕ್ಕೆ ಅವರು ತಂದೊಡ್ಡಿರುವ ಒಟ್ಟಾರೆ ಘನತೆ ಮತ್ತು ಮೈಪುಳಕಳಿಸುವ ಅಭಿನಯವು ಪ್ರತಿಯೊಬ್ಬರ ಹುಬ್ಬೇರುವಂತೆ ಮಾಡಿದೆ. ಈ ಪಾತ್ರದ ಮೂಲಕ ಯಶ್ ಕೇವಲ ಭಾರತೀಯ ಚಿತ್ರರಂಗವಷ್ಟೇ ಅಲ್ಲ, ಜಾಗತಿಕ ಮಟ್ಟದ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದು, ಅವರ ಈ ದಿಟ್ಟ ನಿರ್ಧಾರಕ್ಕೆ ಎಲ್ಲೆಡೆಯಿಂದ ಭೇಷ್ ಎನ್ನಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:  ಅಂದು ಯಶ್​​ನ ತೆಗಳಿ ಇಂದು ಹೊಗಳಿದ ರಾಮ್ ಗೋಪಾಲ್ ವರ್ಮ

ಒಟ್ಟಾರೆಯಾಗಿ, ಪುನೀತ್ ರಾಜ್‌ಕುಮಾರ್ ಅಂದು ಆಡಿದ್ದ ಮಾತು ಇಂದು ಬೆಳ್ಳಿತೆರೆಯ ಮೇಲೆ ಅದ್ಭುತವಾಗಿ ಮೈತಳೆದಿದೆ. ಪೌರಾಣಿಕ ಲೋಕದಲ್ಲಿ ಯಶ್ ಅವರಂತಹ ನಟನಿಗೆ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂಬುದನ್ನು ರಾವಣನ ಪಾತ್ರದ ಮೂಲಕ ಅವರು ಸಾಬೀತುಪಡಿಸಿದ್ದಾರೆ. ಪುನೀತ್ ಅವರ ಆ ದೂರದೃಷ್ಟಿಯ ಮೆಚ್ಚುಗೆಯು ಇಂದಿನ ಯಶ್ ಅವರ ಅಂತರರಾಷ್ಟ್ರೀಯ ಮಟ್ಟದ ಯಶಸ್ಸಿಗೆ ಮತ್ತಷ್ಟು ಕಳೆಕಟ್ಟಿದ್ದು, ಕರುನಾಡಿನ ಹೆಮ್ಮೆಯ ನಟ ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.