ಸಂಕಷ್ಟದ ಸಮಯದಲ್ಲಿ ಧೈರ್ಯಗೆಡದೆ ಹಬ್ಬ ಆಚರಿಸಿದ ವಿಜಯಲಕ್ಷ್ಮಿ ಅವರಿಗೆ ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದಾರೆ. ಶೀಘ್ರದಲ್ಲೇ ದರ್ಶನ್ ಅವರಿಗೆ ಒಳ್ಳೆಯ ಕಾಲ ಬರಲಿ ಹಾಗೂ ಈ ದೀಪಾವಳಿಯ ಬೆಳಕು ಅವರ ಜೀವನದ ಕತ್ತಲೆಯನ್ನು ದೂರ ಮಾಡಲಿ ಎಂದು ಹಾರೈಸುತ್ತಿದ್ದಾರೆ.

ಸಾಂಪ್ರದಾಯಿಕ ಸೀರೆ ಧರಿಸಿ, ತಲೆಯಲ್ಲಿ ಮಲ್ಲಿಗೆ ಹೂ ಮುಡಿದು ಅಚ್ಚುಕಟ್ಟಾಗಿ ಸಿದ್ಧಗೊಂಡಿರುವ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನೆಚ್ಚಿನ ನಟನ ಪತ್ನಿಯ ಈ ಸಕಾರಾತ್ಮಕ ನಡೆಯನ್ನು ಕಂಡು ದರ್ಶನ್ ಅಭಿಮಾನಿಗಳು ಭಾವುಕಾಗಿದ್ದಾರೆ.

ಹೃದಯದಲ್ಲಿ ಪತಿಯ ಕಷ್ಟದ ಚಿಂತೆ ಹಾಗೂ ಆಳವಾದ ನೋವಿದ್ದರೂ, ವಿಜಯಲಕ್ಷ್ಮಿ ಅವರು ಮುಖದಲ್ಲಿ ಮಂದಹಾಸ ಬೀರುತ್ತಾ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ನೋವನ್ನು ಹೊರಹಾಕದೆ ಕುಟುಂಬಕ್ಕಾಗಿ ಧೈರ್ಯದಿಂದ ಮುನ್ನಡೆಯುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಇತ್ತ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲೇ ದಿನ ದೂಡುತ್ತಿದ್ದಾರೆ. ಪತಿಯ ಗೈರುಹಾಜರಿ ವಿಜಯಲಕ್ಷ್ಮಿ ಅವರಿಗೆ ತೀವ್ರ ಮನಸ್ಸಿನ ನೋವು ಹಾಗೂ ಬೇಸರ ತಂದೊಡ್ಡಿದ್ದರೂ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ದೀಪಾವಳಿಯ ಆಚರಣೆಯ ಭಾಗವಾಗಿ ಮನೆಯ ದೇವರ ಕೋಣೆಯಲ್ಲಿ ಹಣತೆಗಳನ್ನು ಬೆಳಗಿಸಿ, ಗಣೇಶ ಹಾಗೂ ಲಕ್ಷ್ಮಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ದೀಪದ ಬೆಳಕು ಕುಟುಂಬದ ಎಲ್ಲ ಕಷ್ಟಗಳನ್ನು ದೂರ ಮಾಡಲಿ ಎಂದು ಭಗವಂತನಲ್ಲಿ ಮಂಡಿಯೂರಿ ಬೇಡಿಕೊಂಡಿದ್ದಾರೆ.

ದೀಪಾವಳಿಯ ಶುಭ ಸಂದರ್ಭದಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಪತಿ ಜೈಲಿನಲ್ಲಿದ್ದರೂ ಧೈರ್ಯಗುಂದದೆ, ಮನೆಯಲ್ಲಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿ ಹಬ್ಬದ ಶುಭಾಶಯ ಕೋರಿದ್ದಾರೆ.

