ಸೋಲಾಪುರ: ಮುಖ್ಯಮಂತ್ರಿ ಅವರು ಘೋಷಿಸಿದಂತೆ ಬರಪೀಡಿತ ರೈತರ ಸುಖ-ದುಃಖಗಳಲ್ಲಿ ಭಾಗಿಯಾಗುವ ಉದ್ದೇಶದಿಂದ ಲೋಕೋಪಯೋಗಿ ಸಚಿವ ಶಿವೇಂದ್ರರಾಜೆ ಭೋಸಲೆ ಸಾಂಗೋಲಾ ತಾಲ್ಲೂಕಿನ ಇಟಕಿ ಗ್ರಾಮದ ರೈತ ಪೋಪಟ ಸಾವಂತ ಅವರ ಮನೆಗೆ ಭೇಟಿ ನೀಡಿ, ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.
ಸಚಿವ ಭೋಸಲೆ ಅವರು ಸಾವಂತ ಕುಟುಂಬದವರಿಗೆ ದೀಪಾವಳಿ ಸಿಹಿತಿಂಡಿ ಹಾಗೂ ಉಡುಗೊರೆಗಳನ್ನು ನೀಡಿ ಹಬ್ಬದ ಶುಭಾಶಯ ಕೋರಿದರು. ರಾಜ್ಯ ಸರ್ಕಾರ ರೈತರ ಬೆನ್ನಿಗೆ ದೃಢವಾಗಿ ನಿಂತಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಧೈರ್ಯ ಕಳೆದುಕೊಳ್ಳದೇ ಸವಾಲುಗಳನ್ನು ಎದುರಿಸಬೇಕು ಎಂದು ಆತ್ಮವಿಶ್ವಾಸ ತುಂಬಿದರು.
ಬರಪೀಡಿತ ರೈತರಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿರುವ ಮುಂಗಡ ಆರ್ಥಿಕ ನೆರವು ಯೋಜನೆಯಡಿ ಪೋಪಟ್ ಗೋವಿಂದ ಸಾವಂತ ಅವರ ಬ್ಯಾಂಕ್ ಖಾತೆಗೆ ₹ 5,000 ಜಮೆ ಮಾಡಲಾಗಿದೆ. ಪೋಪಟ್ ಸಾವಂತ ಅವರ ಕುಟುಂಬದಲ್ಲಿ ಮೂವರು ಸದಸ್ಯರಿದ್ದು, ಅವರ ಹೆಸರಿನಲ್ಲಿ 1 ಹೆಕ್ಟೇರ್ ಕೃಷಿ ಭೂಮಿ ಇದೆ. ಈ ಜಮೀನಿನಲ್ಲಿ ಮೆಕ್ಕೆಜೋಳ ಮತ್ತು ಸಜ್ಜೆ ಬೆಳೆಯಲಾಗಿತ್ತು. ಮಳೆ ಕೊರತೆಯಿಂದಾಗಿ ಮೆಕ್ಕೆಜೋಳದ 0.50 ಹೆಕ್ಟೇರ್ ಹಾಗೂ ಸಜ್ಜೆಯ 0.50 ಹೆಕ್ಟೇರ್ ಸೇರಿದಂತೆ ಒಟ್ಟು ಒಂದು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೊಳಗಾಗಿದೆ. ಹಾನಿಗೊಳಗಾದ ಪ್ರದೇಶದ ಪಂಚನಾಮೆ ಪೂರ್ಣಗೊಳಿಸಲಾಗಿದ್ದು, ಸರ್ಕಾರದ ಆದೇಶದಂತೆ ಅವರ ಬ್ಯಾಂಕ್ ಖಾತೆಗೆ ಮುಂಗಡ ಆರ್ಥಿಕ ನೆರವು ಜಮೆ ಮಾಡಲಾಗಿದೆ.
ಸಾಂಗೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಬಾಬಾಸಾಹೇಬ ದೇಶಮುಖ, ತಹಶೀಲ್ದಾರ್ ಬಾಳೂಬಾಯಿ ಭಾಗವತ, ಜಿಲ್ಲಾ ಪಂಚಾಯಿತಿಯ ಆರೋಗ್ಯ ಸಮಿತಿ ಅಧ್ಯಕ್ಷ ಚೇತನ್ಸಿಂಗ್ ಕೇದಾರ ಸಾವಂತ ಇದ್ದರು.
261109-26-281555842

