ಆಸ್ಟ್ರೇಲಿಯಾ ತಂಡದ ಯುವ ದಾಂಡಿಗ ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ 50 ಇನಿಂಗ್ಸ್​ ಆಡಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ವಿಶ್ವ ದಾಖಲೆಯನ್ನು ಓವನ್ ತಮ್ಮದಾಗಿಸಿಕೊಂಡಿದ್ದಾರೆ. (PC: BBL)

Mo (8)

ಟಿ20 ಕ್ರಿಕೆಟ್​ನಲ್ಲಿ ಈವರೆಗೆ ಒಟ್ಟು 86 ಇನ್ನಿಂಗ್ಸ್‌ಗಳ ನಂತರ ಮಿಚೆಲ್ ಓವನ್ ಸದ್ಯ 181.3 ಸ್ಟ್ರೈಕ್ ರೇಟ್ ಹೊಂದಿದ್ದು, ಈ ಮಲಕ ಕನಿಷ್ಠ 50 ಇನ್ನಿಂಗ್ಸ್ ಆಡಿದ ಆಟಗಾರರ ಪಟ್ಟಿಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನಕ್ಕೇರಿದ್ದಾರೆ. (PC: BBL)

Abhi (20)

ಇದಕ್ಕೂ ಮುನ್ನ ಈ ದಾಖಲೆ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಅಭಿಷೇಕ್ ಶರ್ಮಾ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಅಭಿಷೇಕ್ ಶರ್ಮಾ ಈವರೆಗೆ 218 ಟಿ20 ಇನಿಂಗ್ಸ್‌ಗಳನ್ನು ಆಡಿದ್ದು, ಈ ವೇಳೆ 179.2 ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ 6,634 ರನ್ ಕಲೆಹಾಕಿದ್ದಾರೆ. (PC: IPL)

Mo (9)

ಆಸ್ಟ್ರೇಲಿಯಾದ ಮಿಚೆಲ್ ಓವನ್ ಅವರು ತಮ್ಮ ಒಟ್ಟಾರೆ ಟಿ20 ಕ್ರಿಕೆಟ್ ವೃತ್ತಿಜೀವನದಲ್ಲಿ ಈವರೆಗೆ 86 ಇನಿಂಗ್ಸ್​​ಗಳನ್ನು ಆಡಿದ್ದು, ಈ ವಳೆ 1000 ಎಸೆತಗಳನ್ನು ಎದುರಿಸಿ 181.3 ರ ಸ್ಟ್ರೈಕ್ ರೇಟ್​ನಲ್ಲಿ ಒಟ್ಟು 1813 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: BBL)

Vs (3)

ಇದಾಗ್ಯೂ ಟಿ20 ಇತಿಹಾಸದಲ್ಲೇ ಅತ್ಯಧಿಕ ಸ್ಟ್ರೈಕ್ ರೇಟ್​​ನೊಂದಿಗೆ ಮುನ್ನುಗ್ಗುತ್ತಿರುವ ವೈಭವ್ ಸೂರ್ಯವಂಶಿಗೆ ಈ ದಾಖಲೆಯನ್ನು ಮುರಿಯಲು ಅತ್ಯುತ್ತಮ ಅವಕಾಶವಿದೆ. ಅಂದರೆ ವೈಭವ್ ಈಗಾಗಲೇ 44 ಟಿ20 ಇನಿಂಗ್ಸ್ ಆಡಿದ್ದು, ಈ ವೇಳೆ 213.75 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದೇ ಆರ್ಭಟ ಮುಂದುವರೆಸಿದರೆ, ಕನಿಷ್ಠ 50 ಇನಿಂಗ್ಸ್​​ಗಳನ್ನು ಆಡಿದ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಎಂಬ ವಿಶ್ವ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಲಿದೆ. (PC: IPL)