ಬೆಂಗಳೂರು: ಕೇಂದ್ರ ಅಪರಾಧ ವಿಭಾಗವನ್ನು (ಸಿಸಿಬಿ) ‘ರೌಡಿ ನಿಗ್ರಹ ದಳ’ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ.

ನಗರ ಪೊಲೀಸ್‌ ಕಮಿಷನರೇಟ್‌ ಪುನರ್‌ ರಚನೆಯ ಭಾಗವಾಗಿ ಸರ್ಕಾರವು ಸಿಸಿಬಿ ವಿಭಾಗವನ್ನು ರೌಡಿ ನಿಗ್ರಹ ದಳ ಎಂದು ಮರು ನಾಮಕರಣ ಮಾಡಿದೆ. ಆ ಮೂಲಕ ಸಿಸಿಬಿ ಇತಿಹಾಸ ಪುಟ ಸೇರುತ್ತಿದೆ.

ಸಿಸಿಬಿ ಘಟಕವು 1971ರಲ್ಲಿ ವಿಶೇಷ ದಳದ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಎಸಿಪಿ ನೇತೃತ್ವದ ತಂಡವು ಕಾರ್ಯ ನಿರ್ವಹಣೆ ಮಾಡುತ್ತಿತ್ತು. 1993ರಲ್ಲಿ ಅದನ್ನು ಸಿಸಿಬಿ ಎಂದು ಮರುನಾಮಕರಣ ಮಾಡಲಾಗಿತ್ತು. ಕ್ರಮೇಣ, 1994ರಲ್ಲಿ ಸಿಸಿಬಿ ವಿಭಾಗಕ್ಕೆ ಹೆಚ್ಚಿನ ಬಲ ತುಂಬುವ ನಿಟ್ಟಿನಲ್ಲಿ ಡಿಸಿಪಿ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸಲು ಅನುವು ಮಾಡಿ ಕೊಡಲಾಗಿತ್ತು. ನಂತರ, 2002ರಲ್ಲಿ ಅಪರಾಧಗಳ ವರ್ಗೀಕರಣದ ಆಧಾರದ ಮೇಲೆ ವಿವಿಧ ವಿಭಾಗಗಳಿಗೆ ಜವಾಬ್ದಾರಿ ವಹಿಸಲಾಗಿತ್ತು.

2004ರಲ್ಲಿ ಸಿಸಿಬಿ ವಿಭಾಗಕ್ಕೆ ತನಿಖಾ ಸಾಮರ್ಥ್ಯ ಮತ್ತಷ್ಟು ವಿಸ್ತರಿಸಲಾಗಿತ್ತು. 2019ರಲ್ಲಿ ಸಿಸಿಬಿಯನ್ನು 6 ಪ್ರಮುಖ ವಿಭಾಗಗಳಾಗಿ ಪುನರ್‌ವಿಂಗಡಣೆ ಮಾಡಲಾಗಿತ್ತು. 2021ರಲ್ಲಿ ಸಿಸಿಬಿ ಅಧಿಕಾರಿಗಳ, ತನಿಖಾ ಅಧಿಕಾರ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು.

ರೌಡಿ ನಿಗ್ರಹ ಪಡೆಯ ಮುಖ್ಯಸ್ಥರಾಗಿ ಹೇಮಂತ್‌ ನಿಂಬಾಳ್ಕರ್ ಅವರನ್ನು ನೇಮಿಸಲಾಗಿದೆ. ಇನ್ನೂ ಇಬ್ಬರು ಡಿಸಿಪಿಗಳನ್ನು ನೇಮಿಸಲು ಉದ್ದೇಶಿಸಲಾಗಿದೆ. ರೌಡಿ ನಿಗ್ರಹ ಪಡೆ ರಚಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ಹಿಂದೆ ಘೋಷಿಸಿದ್ದರು.

261120-4-374980230