ಬೆಂಗಳೂರು: ಮುಖ್ಯಮಂತ್ರಿ ಅಧಿಕೃತ ನಿವಾಸ ‘ಗಂಗಾ’ಕ್ಕೆ ಗುರುವಾರ ಸಚಿವರು, ಆಡಳಿತ–ವಿರೋಧ ಪಕ್ಷಗಳ ಸಂಸದರು, ಶಾಸಕರು, ಅಧಿಕಾರಿಗಳು ಭೇಟಿ ನೀಡಿ, ಶುಭ ಹಾರೈಸಿದರು. ಡಿ.ಕೆ. ಶಿವಕುಮಾರ್‌ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾದರು.

ಶಿವಕುಮಾರ್‌ ಸಂಪುಟದ ಬಹುತೇಕ ಸಚಿವರು, ಸಂಸದರು, ಶಾಸಕರು ಭಾಗಿಯಾಗಿದ್ದರು. ವಿಶೇಷವಾಗಿ ಬಿಜೆಪಿ ಶಾಸಕರಾದ ಎಸ್‌.ಆರ್. ವಿಶ್ವನಾಥ್‌, ಎಂ.ಕೃಷ್ಣಪ್ಪ, ಕೆ. ಗೋಪಾಲಯ್ಯ,ಎಲ್.ಎ. ರವಿ ಸುಬ್ರಹ್ಮಣ್ಯ, ಬಿಜೆಪಿ ಸಹ ಸದಸ್ಯ ಜನಾರ್ದನ ರೆಡ್ಡಿ, ಮಾಜಿ ಸಚಿವ ಎಚ್‌. ವಿಶ್ವನಾಥ್ ಭೇಟಿ ನೀಡಿ, ಅಭಿನಂದಿಸಿದರು.

500ಕ್ಕೂ ಹೆಚ್ಚು ಆಹ್ವಾನಿತರಿಗೆ ವಿವಿಧ ಬಗೆಯ ಸಿಹಿ ತಿಂಡಿಗಳು, ತರಹೇವಾರಿ ಖಾದ್ಯಗಳನ್ನು ಒಳಗೊಂಡ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೂದು ಬಣ್ಣದ ಜುಬ್ಬಾ, ಬಿಳಿ ಬಣ್ಣದ ಧೋತಿ, ಚಿನ್ನದ ಬಣ್ಣದ ಬಳಿ ಶಲ್ಯ ಧರಿಸಿದ್ದ ಮುಖ್ಯಮಂತ್ರಿ ಎಲ್ಲರನ್ನೂ ಸ್ವಾಗತಿಸಿ, ಸತ್ಕರಿಸಿದರು.

ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಗೈರಾಗಿದ್ದರು. ಚಿಕ್ಕಮಗಳೂರು ಕಾರ್ಯಕ್ರಮಕ್ಕೆ ತೆರಳಿದ್ದ ಕಾರಣ ಅವರು ಬರಲು ಸಾಧ್ಯವಾಗಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.

261120-51-98044142