ಬೆಂಗಳೂರು: ಲೋಕಾಯುಕ್ತ ಎಡಿಜಿಪಿಯಾಗಿ ಎಸ್‌. ಮುರುಗನ್‌ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ, ಬೆಂಗಳೂರು ಕಮಿಷನರ್ ಆಗಿದ್ದ ಸೀಮಾಂತ್ ಕುಮಾರ್ ಸಿಂಗ್ ಅವರಿಗೆ ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ಎಡಿಜಿಪಿ ಹುದ್ದೆ ತೋರಿಸಿದೆ.

ಇವರೂ ಸೇರಿ ಒಟ್ಟು 32 ಐಪಿಎಸ್‌ ಅಧಿಕಾರಿಗಳನ್ನು ಒಂದೇ ದಿನ ವರ್ಗಾವಣೆ ಮಾಡಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಆರ್‌.ಹಿತೇಂದ್ರ – ಮುಖ್ಯ ಪೊಲೀಸ್ ಕಮಿಷನರ್‌, ಬೆಂಗಳೂರು ನಗರ. ಬಿ.ಕೆ. ಸಿಂಗ್‌, ಎಡಿಜಿಪಿ, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ. ಹೇಮಂತ್‌ ಎಂ. ನಿಂಬಾಳ್ಕರ್‌ – ಸಂಚಾರ ವಿಭಾಗದ ಕಮಿಷನರ್‌, ಬೆಂಗಳೂರು ನಗರ (ರೌಡಿ ನಿಗ್ರಹ ಪಡೆಯ ಹೆಚ್ಚುವರಿ ಹೊಣೆ). ಮನೀಶ್‌ ಖರ್ಬೀಕರ್‌ – ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ಘಟಕ, ಬೆಂಗಳೂರು. ಲಾಬೂರಾಮ್ – ಕಮಿಷನರ್‌, ಕೇಂದ್ರ ವಿಭಾಗ, ಬೆಂಗಳೂರು. ಪಿ.ಎಸ್‌.ಹರ್ಷ– ಕಮಿಷನರ್‌, ಪೂರ್ವ ವಿಭಾಗ, ಬೆಂಗಳೂರು

ವಿಕಾಸ್‌ ಕುಮಾರ್ ವಿಕಾಸ್‌– ಕಮಿಷನರ್‌, ಪಶ್ಚಿಮ ವಿಭಾಗ, ಬೆಂಗಳೂರು. ಎನ್‌.ಶಶಿಕುಮಾರ್– ಐಜಿಪಿ, ಪಶ್ಚಿಮ ವಲಯ, ಮಂಗಳೂರು. ಎಂ.ಬಿ. ಬೋರಲಿಂಗಯ್ಯ – ಕಮಿಷನರ್, ಉತ್ತರ ವಿಭಾಗ, ಬೆಂಗಳೂರು. ಅನುಪಮ್ ಅಗರ್‌ವಾಲ್, ಐಜಿಪಿ, ಕೆಎಸ್‌ಆರ್‌ಪಿ. ಎಸ್‌.ಡಿ.ಶರಣಪ್ಪ– ಡಿಐಜಿಪಿ, ರೈಲ್ವೆ ವಿಭಾಗ. ಸಿ.ವಂಶಿಕೃಷ್ಣ– ಜಂಟಿ ಕಮಿಷನರ್, ಆಡಳಿತ ವಿಭಾಗ, ಬೆಂಗಳೂರು (ಕಮಿಷನರ್, ದಕ್ಷಿಣ ವಿಭಾಗದ ಹೆಚ್ಚುವರಿ ಹೊಣೆ). ಕುಲದೀಪ್‌ ಕುಮಾರ್ ಆರ್. ಜೈನ್‌ – ಕಮಿಷನರ್‌, ಕಲಬುರಗಿ.

ಎಂ.ಪುಟ್ಟಮಾದಯ್ಯ – ಡಿಐಜಿಪಿ, ದಕ್ಷಿಣ ವಿಭಾಗ, ಮೈಸೂರು. ಎಂ. ಅಶ್ವಿನಿ – ಡಿಐಜಿಪಿ, ನೇಮಕಾತಿ ವಿಭಾಗ, ಬೆಂಗಳೂರು. ಜೆ.ಕೆ.ರಶ್ಮಿ – ಡಿಐಜಿಪಿ, ಜಾಗೃತ ದಳ, ಜಲಸಂಪನ್ಮೂಲ ಇಲಾಖೆ. ಅನೂಪ್‌ ಎ. ಶೆಟ್ಟಿ– ಡಿಸಿಪಿ, ಪೂರ್ವ ವಿಭಾಗ(ಸಂಚಾರ), ಬೆಂಗಳೂರು. ಲಕ್ಷ್ಮಣ್‌ ನಿಂಬರಗಿ – ಡಿಸಿಪಿ, ನಗರ ಸಶಸ್ತ್ರ ದಳ, ಬೆಂಗಳೂರು. ಚನ್ನಬಸವಣ್ಣ ಲಂಗೋಟಿ – ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ (ಇಂದಿರಾ ನಗರ)

ಡಿ.ಎಲ್‌.ನಾಗೇಶ್‌– ಡಿಸಿಪಿ, ಉತ್ತರ ವಿಭಾಗ (ಯಶವಂತಪುರ). ಲೋಕೇಶ್ ಜಗಲಾಸರ – ಡಿಸಿಪಿ, ಕೇಂದ್ರ ವಿಭಾಗ (ಸಂಚಾರ), ಬೆಂಗಳೂರು. ಎನ್‌.ಯತೀಶ್‌, ಡಿಸಿಪಿ, ಪಶ್ಚಿಮ ವಿಭಾಗ (ಕೆಂಗೇರಿ). ಸೈದುಲ್ಲಾ ಅಡಾವತ್‌ – ಎಸ್‌ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು. ಬಿ.ಎಲ್‌.ಶ್ರೀಹರಿ ಬಾಬು, ಡಿಸಿಪಿ, ವೈಟ್‌ಫೀಲ್ಡ್‌, ಬೆಂಗಳೂರು

ಎಂ.ಎಸ್‌.ಗೀತಾ, ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು. ರಂಜಿತ್ ಕುಮಾರ್ ಬಂಡಾರು, ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು.ಕೆ.ವಿ.ಅಶೋಕ್, ಡಿಸಿಪಿ, ಪೀಣ್ಯ.ವಿಕ್ರಮ್ ಆಮ್ಟೆ , ಡಿಸಿಪಿ, ಉತ್ತರ ವಿಭಾಗ, ಬೆಂಗಳೂರು. ಲಕ್ಷ್ಮಿ ಗಣೇಶ್‌, ಡಿಸಿಪಿ, ಕೇಂದ್ರ ವಿಭಾಗ (ಗಾಂಧಿ ನಗರ). ಪಿ.ವಿ.ಸ್ನೇಹಾ, ಡಿಸಿಪಿ, ಪಶ್ಚಿಮ ವಿಭಾಗ (ಸಂಚಾರ), ಬೆಂಗಳೂರು

261120-4-1210525441