‘ರಾಮಾಯಣ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1500 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಸಿನಿಮಾ, ‘ಧುರಂಧರ್ 2’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳ ದಾಖಲೆಯನ್ನು ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ ಮುರಿದಿದೆ. ಆದರೆ ಸಿನಿಮಾ 1500 ಕೋಟಿ ಗಳಿಕೆಯ ಬಳಿಕ ಬಾಕ್ಸ್ ಆಫೀಸ್ನಲ್ಲಿ ತುಸು ನಿಧಾನವಾದಂತಿದೆ. ನಿನ್ನೆ ಅಂದರೆ 15ನೇ ದಿನ, ‘ರಾಮಾಯಣ’ ಸಿನಿಮಾದ ಗಳಿಕೆಯಲ್ಲಿ ಇಳಿಕೆ ಕಂಡು ಬಂದಿದೆ. ಸಿನಿಮಾ ತಮ್ಮ 15ನೇ ದಿನ ಬಾಕ್ಸ್ ಆಫೀಸ್ನಲ್ಲಿ 19.35 ಕೋಟಿ ರೂಪಾಯಿ ಮಾತ್ರವೇ ಗಳಿಕೆ ಮಾಡಿದೆ. ಇದು ತೀರ ಸಣ್ಣ ಮೊತ್ತವಲ್ಲದಿದ್ದರೂ, 2000 ಕೋಟಿ ಗುರಿ ಹೊತ್ತಿರುವ ಸಿನಿಮಾಕ್ಕೆ ಸಣ್ಣ ಮೊತ್ತವೇ ಆಗಿದೆ.
‘ರಾಮಾಯಣ’ ಸಿನಿಮಾವು 15ನೇ ದಿನದಲ್ಲಿ 19.35 ಕೋಟಿ ರೂಪಾಯಿ ಹಣ ಗಳಿಸಿದ್ದು, ಆ ಮೂಲಕ ಸಿನಿಮಾದ ಒಟ್ಟು ಗಳಿಕೆ 1547 ಕೋಟಿ ರೂಪಾಯಿಗಳಾಗಿವೆ. ಭಾರತದಾದ್ಯಂತ ಸಿನಿಮಾದ 21437 ಶೋಗಳು ಪ್ರದರ್ಶನ ಆಗುತ್ತಿದ್ದು, ಅದರಲ್ಲಿ ಹಿಂದಿಯಲ್ಲಿ ಹೆಚ್ಚು ಅಂದರೆ 17 ಸಾವಿರಕ್ಕೂ ಹೆಚ್ಚು ಶೋಗಳು ಪ್ರದರ್ಶನ ಆಗುತ್ತಿವೆ. ನಿನ್ನೆ (ನವೆಂಬರ್ 19) ಹಿಂದಿ ಆವೃತ್ತಿ 14 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಕರ್ನಾಟಕದಲ್ಲಿ 1.40 ಕೋಟಿ, ತಮಿಳಿನಲ್ಲಿ 1.50 ಕೋಟಿ, ತೆಲುಗು ಆವೃತ್ತಿ 70 ಲಕ್ಷ ಮತ್ತು ವಿಶೇಷವಾಗಿ ಮಲಯಾಳಂ ಆವೃತ್ತಿ 1.75 ಕೋಟಿ ಗಳಿಕೆ ಮಾಡಿದೆ. ದಕ್ಷಿಣ ಭಾರತದಲ್ಲಿ ಮಲಯಾಳಂ ಆವೃತ್ತಿ ಹೆಚ್ಚು ಹಣ ಗಳಿಕೆ ಮಾಡಿರುವುದು ಅಪರೂಪ.
14ನೇ ದಿನದ ಗಳಿಕೆಗೆ ಹೋಲಿಕೆ ಮಾಡಿದರೆ 15ನೇ ದಿನದ ಗಳಿಕೆಯಲ್ಲಿ ಇಳಿಕೆ ಕಂಡು ಬಂದಿದೆ. ‘ರಾಮಾಯಣ’ ಸಿನಿಮಾವು 14ನೇ ದಿನದಲ್ಲಿ 23.20 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ 15ನೇ ದಿನ ಗಳಿಕೆಯಲ್ಲಿ ಇಳಿಕೆಯಾಗಿದ್ದು 19.35 ಕೋಟಿ ಗಳಿಸಿದೆ. ಆದರೆ ಈ ಮೊತ್ತ ವಾರಾಂತ್ಯದಲ್ಲಿ ಅಂದರೆ ಇಂದಿನಿಂದ ಮುಂದಿನ ಮೂರು ನಾಲ್ಕು ದಿನಗಳಲ್ಲಿ ಏರಿಕೆ ಆಗಲಿದೆ. ವಾರಾಂತ್ಯದಲ್ಲಿ ಕುಟುಂಬ ಪ್ರೇಕ್ಷಕರು ಚಿತ್ರಮಂದಿರಕ್ಕೆ ಧಾವಿಸುವ ಸಾಧ್ಯತೆ ಇರುವ ಕಾರಣ ಸಿನಿಮಾದ ಗಳಿಕೆಯಲ್ಲಿ ಮತ್ತೆ ಹೆಚ್ಚಳ ಆಗುವ ದಟ್ಟ ಸಾಧ್ಯತೆ ಇದೆ.
ಇದನ್ನೂ ಓದಿ:ವಿಶ್ವದಾದ್ಯಂತ 1500 ಕೋಟಿ ಗಳಿಸಿದ ‘ರಾಮಾಯಣ’; 2000 ಕೋಟಿ ಗಡಿ ತಲುಪುತ್ತಾ ರಣಬೀರ್-ಯಶ್ ಸಿನಿಮಾ?
ವಿಶ್ವ ಬಾಕ್ಸ್ ಆಫೀಸ್ನಲ್ಲಿ 1500 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ‘ರಾಮಾಯಣ’ ಸಿನಿಮಾ 2000 ಕೋಟಿ ಗಳಿಕೆ ಮಾಡುವ ನಿರೀಕ್ಷೆಯಲ್ಲಿದೆ. ಆ ಮೂಲಕ ಭಾರತದ ಹಿಂದಿನ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುವ ಮಹಾತ್ವಾಕಾಂಕ್ಷೆ ಹೊಂದಿದೆ. ಆದರೆ ಎರಡನೇ ವಾರದ ಬಳಿಕ ಸಿನಿಮಾದ ಗಳಿಕೆಯಲ್ಲಿ ಆಗಿರುವ ಇಳಿಕೆ 2000 ಕೋಟಿಯ ನಿರೀಕ್ಷೆಯನ್ನು ತುಸು ಮಂಕಾಗಿಸಿದೆ. ಆದರೆ ವಾರಾಂತ್ಯದ ಕಲೆಕ್ಷನ್ ಹೆಚ್ಚಾದಲ್ಲಿ ಮತ್ತೆ 2000 ಕೋಟಿ ಗಳಿಕೆ ಮಾಡುವ ಆಸೆ ಜೀವಂತವಾಗಿರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

