ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ತಮ್ಮ ಸಿನಿಮಾಗಳಿಗಿಂತಲೂ ಖಾಸಗಿ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ತಮ್ಮ ಸಾಧಾರಣ ನಟನೆ, ವಿದೇಶಿ ಆಕ್ಸೆಂಟ್ ಭರಿತ ಸಂಭಾಷಣೆ ಹೇಳುವ ಶೈಲಿ, ಪದೇ ಪದೇ ಬಾಯ್​​ಫ್ರೆಂಡ್ ಬದಲಾವಣೆ ಮಾಡುವುದು ಇನ್ನಿತರೆ ಕಾರಣಗಳಿಗಾಗಿ ಪದೇ ಪದೇ ಟ್ರೋಲ್ ಆಗುತ್ತಲೇ ಇರುವ ಅನನ್ಯಾ ಪಾಂಡೆ. ಇದೀಗ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದರು. ಈ ವೇಳೆ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದು, ತಾವು ಮತ್ತೊಮ್ಮೆ ಸಿಂಗಲ್ ಆಗಿರುವುದಾಗಿ ಹೇಳಿದ್ದಾರೆ. ಆ ಮೂಲಕ ತಮ್ಮ ವಿದೇಶಿ ಬಾಯ್​​ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.

ಅನನ್ಯಾ ಪಾಂಡೆ ಮತ್ತು ಬಿರ್ಲಾ ಸಮೂಹ ಹಾಗೂ ಇದೀಗ ಆರ್​​ಸಿಬಿ ತಂಡದ ಹೊಸ ಮಾಲಕಿ, ಯುವ ಉದ್ಯಮಿ ಅನನ್ಯಾ ಬಿರ್ಲಾ ಇಬ್ಬರೂ ಒಟ್ಟಿಗೆ ‘ಕಾಫಿ ವಿತ್ ಕರಣ್’ಶೋಗೆ ಆಗಮಿಸಿದ್ದರು. ಶೋನಲ್ಲಿ ಕರಣ್ ಜೋಹರ್, ಇಬ್ಬರು ಯುವತಿಯರಿಗೆ ಹಲವಾರು ಖಾಸಗಿ ಪ್ರಶ್ನೆಗಳನ್ನು ಕೇಳಿದರು. ಅನನ್ಯಾ ಪಾಂಡೆ ಮತ್ತು ಅನನ್ಯಾ ಬಿರ್ಲಾ ಇಬ್ಬರೂ ಸಹ ತಮ್ಮ ಲವ್ ಲೈಫ್ ಹಾಗೂ ಇನ್ನಿತರೆ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ.

ಈ ವೇಳೆ ಅನನ್ಯಾ ಪಾಂಡೆ, ತಾವು ಮತ್ತೆ ಸಿಂಗಲ್ ಆಗಿರುವುದಾಗಿಯೂ, ಜೋಡಿ ಆಗಲು ರೆಡಿ ಇರುವುದಾಗಿಯೂ ಹೇಳಿದ್ದಾರೆ. ಅಲ್ಲದೆ, ತಾವು ಈಗ ಸಿಂಗಲ್ ಆಗಿರುವುದನ್ನು ಎಂಜಾಯ್ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ. ನಾನು ಮತ್ತೊಬ್ಬರನ್ನು ಪ್ರೀತಿಸಿ ಅವರನ್ನು ಜೀವನಕ್ಕೆ ಕರೆದುಕೊಳ್ಳುವ ಮೊದಲು, ನನ್ನನ್ನು ನಾನು ಪ್ರೀತಿಸಬೇಕಿದೆ. ಅದಕ್ಕಾಗಿ ನಾನು ಸ್ವಲ್ಪ ಸಮಯ ತೆಗೆದುಕೊಳ್ಳಲಿದ್ದೇನೆ’ ಎಂದಿದ್ದಾರೆ ಅನನ್ಯಾ ಪಾಂಡೆ.

ಇದನ್ನೂ ಓದಿ:ಇಬ್ಬರು ಬಾಲಿವುಡ್ ನಟರಿಗೆ ಹೆಚ್ಚಿದ ಭದ್ರತೆ, ಯಾವ ನಟರಿಗೆ ಯಾವ ಮಾದರಿ ಭದ್ರತೆ?

ಅಸಲಿಗೆ ಅನನ್ಯಾ ಪಾಂಡೆ, ವಿದೇಶಿ ಪ್ರಜೆ ವಾಲ್ಟರ್ ಬ್ಲಾಂಕೊ ಜೊತೆಗೆ ಪ್ರೀತಿಯಲ್ಲಿದ್ದು, ಇಬ್ಬರು ಕಳೆದ ಎರಡು ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಆದರೆ ಇತ್ತೀಚೆಗಷ್ಟೆ ಈ ಜೋಡಿ ಬ್ರೇಕಪ್ ಮಾಡಿಕೊಂಡ ಸುದ್ದಿ ಹರಿದಾಡಿತ್ತು. ಆದರೆ ಈಗ ಅನನ್ಯಾ ಪಾಂಡೆ ಆ ಸುದ್ದಿಯನ್ನು ಖಾತ್ರಿ ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮದುವೆಯ ಬಗ್ಗೆಯೂ ಮಾತನಾಡಿರುವ ಅನನ್ಯಾ, ‘ನಾನು ಪಕ್ಕಾ ಮದುವೆ ಮೆಟಿರಿಯಲ್, ನನಗೆ ಮದುವೆ ಆಸೆ ಇದೆ. ನಾನು ಖಂಡಿತ ಭವಿಷ್ಯದಲ್ಲಿ ಮದುವೆ ಆಗುತ್ತೀನಿ’ ಎಂದಿದ್ದಾರೆ.

ಇದೇ ಶೋನಲ್ಲಿ ಅನನ್ಯಾ ಪಾಂಡೆ, ಗೇಮ್​ ಒಂದಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಆರ್ಯನ್ ಅವರಿಗೆ ಕರೆ ಮಾಡಿದರು. ಅದಕ್ಕೆ ಮುಂಚೆ ಇನ್ನೂ ಕೆಲವರಿಗೆ ಕರೆ ಮಾಡಿದ್ದರು. ಆಗ ಮತ್ತೊಬ್ಬ ಅತಿಥಿ ಅನನ್ಯಾ ಬಿರ್ಲಾ, ‘ನೀನು ನಿನ್ನ ಎಲ್ಲ ಹಳೆಯ ಬಾಯ್​​ಫ್ರೆಂಡ್​’ಗಳಿಗೆ ಕರೆ ಮಾಡಿಬಿಟ್ಟಿದ್ದೀಯ’ ಎಂದರು. ಆ ಮೂಲಕ ಅನನ್ಯಾ ಪಾಂಡೆ ಪದೇ ಪದೇ ಬಾಯ್​​ಫ್ರೆಂಡ್ ಬದಲಿಸುವ ಚಾಳಿ ಹೊಂದಿರುವ ನಟಿ ಎಂದರು ಪರೋಕ್ಷವಾಗಿ ಹೇಳಿದರು. ಕರಣ್ ಜೋಹರ್ ಸಹ ಇದನ್ನೇ ಹೇಳಿದರು. ‘ಅನನ್ಯಾ ಶುಕ್ರವಾರ ಬ್ರೇಕಪ್ ಮಾಡಿಕೊಂಡು ಒಂದೆರಡು ದಿನ ಬೇಜಾರಿನಲ್ಲಿರುತ್ತಾರೆ, ಸೋಮವಾರದ ಹೊತ್ತಿಗೆ ಮತ್ತೆ ಸರಿ ಹೋಗಿರುತ್ತಾರೆ’ ಎಂದರು. ಒಟ್ಟಾರೆ ಅನನ್ಯಾ ಪಾಂಡೆ ಮತ್ತೆ ಬ್ರೇಕಪ್ ಮಾಡಿಕೊಂಡು ಈಗ ಸಿಂಗಲ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ