ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ರಚನೆಯ ಮಾದರಿಯಲ್ಲೇ ಬೆಂಗಳೂರಿನಲ್ಲಿ ಐದು ಪ್ರತ್ಯೇಕ ಪೊಲೀಸ್‌ ಕಮಿಷನರೇಟ್‌ಗಳ ರಚನೆ ಮಾಡಿ ರಾಜ್ಯ ಸರ್ಕಾರವು ಬುಧವಾರ ಅಧಿಕೃತ ಆದೇಶ ಹೊರಡಿಸಿದ್ದು ನಗರದ ಮೊದಲ ‘ಮುಖ್ಯ ಪೊಲೀಸ್‌ ಕಮಿಷನರ್’ ಆಗಿ ಆರ್.ಹಿತೇಂದ್ರ ಅವರನ್ನು ನೇಮಿಸಲಾಗಿದೆ.

ಬುಧವಾರ ರಾತ್ರಿಯೇ ಕಮಿಷನರ್‌ ಕಚೇರಿಗೆ ಬಂದ ಹಿತೇಂದ್ರ ಅವರು ಅಧಿಕಾರ ವಹಿಸಿಕೊಂಡರು.

ಒಂದೂವರೆ ವರ್ಷದಿಂದ ನಗರ ಪೊಲೀಸ್‌ ಕಮಿಷನರ್ ಆಗಿ ಕೆಲಸ ಮಾಡಿದ್ದ ಎಡಿಜಿಪಿ ಸೀಮಾಂತ್‌ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ದಳಕ್ಕೆ ವರ್ಗಾವಣೆ ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿ, ಸೀಮಾಂತ್‌ ಅವರನ್ನು ನೇಮಿಸಲಾಗಿತ್ತು.

ಹಿತೇಂದ್ರ ಅವರು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ, ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಹೈಕೋರ್ಟ್‌ ನೇಮಿಸಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಜಿಬಿಎ ರಚನೆಯಾಗಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಐದು ಪ್ರತ್ಯೇಕ ಪೊಲೀಸ್‌ ಕಮಿಷನರೇಟ್‌ಗಳ ರಚನೆಗೆ ಕಳೆದ ಅಕ್ಟೋಬರ್ 6ರಂದು ನಡೆದಿದ್ದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು. ಅಲ್ಲದೇ, ನಗರ ಪೊಲೀಸ್ ಕಮಿಷನರ್ ಹುದ್ದೆಯನ್ನು ‘ಮುಖ್ಯ ಪೊಲೀಸ್ ಕಮಿಷನರ್‌’ ಎಂದು ಉನ್ನತೀಕರಿಸಲು ತೀರ್ಮಾನ ಮಾಡಲಾಗಿತ್ತು. ಇನ್ನು ಹೊಸದಾಗಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್‌ ಕಮಿಷನರೇಟ್‌ಗಳನ್ನು ವಿಭಜಿಸಿ ಪುನರ್‌ ರಚನೆ ಮಾಡಲಾಗಿದೆ. ಐದು ವಿಭಾಗಕ್ಕೂ ಐಜಿಪಿ ದರ್ಜೆಯ ಅಧಿಕಾರಿಗಳನ್ನು ಕಮಿಷನರ್‌ಗಳನ್ನು ನೇಮಿಸಿ ಆದೇಶಿಸಲಾಗಿದೆ.

ಅದೇ ರೀತಿ, ಜಂಟಿ ಪೊಲೀಸ್ ಕಮಿಷನರ್‌(ಸಂಚಾರ) ಹುದ್ದೆಯನ್ನು ಪೊಲೀಸ್‌ ಕಮಿಷನರ್‌(ಸಂಚಾರ) ಎಂದು ಮರು ನಾಮಕರಣ ಮಾಡಲಾಗಿದೆ. ಸಂಚಾರ ವಿಭಾಗದ ಪೊಲೀಸ್‌ ಕಮಿಷನರ್ ಆಗಿ ಹೇಮಂತ್‌ ಎಂ. ನಿಂಬಾಳ್ಕರ್ ಅವರನ್ನು ನೇಮಿಸಲಾಗಿದೆ. ಅವರಿಗೆ ರೌಡಿ ನಿಗ್ರಹ ಪಡೆಯ ಕಮಿಷನರ್ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.

ಮುಖ್ಯ ಪೊಲೀಸ್ ಕಮಿಷನರ್‌ ಮಾರ್ಗದರ್ಶನ ದಲ್ಲಿ ನಗರದ ಅಪರಾಧ ನಿಯಂತ್ರಣ ಮತ್ತು ರೌಡಿಗಳ ಚಟುವಟಿಕೆಗಳ ಮೇಲ್ವಿಚಾರಣೆಯ ಹೊಣೆ ಗಾರಿಕೆಯನ್ನು ಹೇಮಂತ್‌ ನಿರ್ವಹಿಸಲಿದ್ದಾರೆ.

ನಗರದ ಹೊರವಲಯದ ಪೊಲೀಸ್ ಠಾಣೆಗಳು ಸೇರಿದಂತೆ ಒಟ್ಟು 11 ಠಾಣೆಗಳಿಗೆ ಮೊದಲ ಹಂತದಲ್ಲಿ 276 ಹೊಸ ಹುದ್ದೆ ಸೃಜನೆಗೆ ಸಮ್ಮತಿ ನೀಡಲಾಗಿತ್ತು. ಇದೀಗ ಅಧಿಕೃತವಾಗಿ ಹೊಸ ಕಮಿಷನರ್‌ಗಳು ನೇಮಕಗೊಂಡಿದ್ದು, ಶೀಘ್ರದಲ್ಲಿಯೇ ಹೊಸ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ನಗರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಪ್ರತ್ಯೇಕ ಸಂಚಾರ ಪೊಲೀಸ್ ಕಮಿಷನರೇಟ್ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಉತ್ತಮ ಕೆಲಸ ಮಾಡಿದ ತೃಪ್ತಿ’

ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಪ್ರತಿನಿತ್ಯವೂ ಸವಾಲು ಇದ್ದೇ ಇರುತ್ತದೆ. ನಗರ ಪೊಲೀಸ್ ಕಮಿನಷರ್ ಆಗಿ ಉತ್ತಮ ಕೆಲಸ ಮಾಡಿದ ತೃಪ್ತಿಯಿದೆ ಎಂದು ವರ್ಗಾವಣೆಗೊಂಡ ಸೀಮಾಂತ್‌ ಕುಮಾರ್ ಸಿಂಗ್‌ ತಿಳಿಸಿದರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇಡೀ ಪೊಲೀಸ್‌ ತಂಡವು ಅತ್ಯುತ್ತಮವಾಗಿ ಕೆಲಸ ಮಾಡಿದೆ. ಅನೇಕ ಸವಾಲುಗಳು ಎದುರಾದರೂ, ಸಾರ್ವಜನಿಕರ ಸಹಕಾರ, ಹಿರಿಯ ಅಧಿಕಾರಿಗಳು, ಸರ್ಕಾರ ಹಾಗೂ ಮಾಧ್ಯಮಗಳ ಬೆಂಬಲದಿಂದ ಉತ್ತಮ ಕಾರ್ಯನಿರ್ವಹಣೆ ಸಾಧ್ಯ ಆಯಿತು ಎಂದು ಸ್ಮರಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ಜಂಟಿ ಕಮಿಷನರ್‌, ವಿಶೇಷ ಕಮಿಷನರ್‌ಗಳು, ಡಿಸಿಪಿಗಳು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳಿಂದ ಸಿಬ್ಬಂದಿಯವರೆಗೆ ಪ್ರತಿಯೊಬ್ಬರೂ ಹಗಲಿರುಳು ಶ್ರಮಿಸಿದ್ದಾರೆ. ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಇಲ್ಲ. ಇಡೀ ತಂಡದ ಬೆಂಬಲದಿಂದಲೇ ಇದು ಸಾಧ್ಯವಾಯಿತು ಎಂದು ಹೇಳಿದರು.

​ಹಲವು ಮಹತ್ವದ ಮತ್ತು ಸವಾಲಿನ ಪ್ರಕರಣಗಳನ್ನು ತಮ್ಮ ತಂಡ ಯಶಸ್ವಿಯಾಗಿ ಭೇದಿಸಿದೆ. ಬೆಂಗಳೂರನ್ನು ಮಾದಕ ಮುಕ್ತ ನಗರವನ್ನಾಗಿ ಮಾಡುವ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಗುರಿಯೊಂದಿಗೆ ಪ್ರತಿ ಪ್ರದೇಶದಲ್ಲೂ ತಂಡದೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಲಾಯಿತು. ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಪ್ರತಿ ಮಂಗಳವಾರ ಸಂವಾದ ಸಭೆಗಳನ್ನು ನಡೆಸಿದ್ದೇನೆ ಎಂದು ಹೇಳಿದರು.

‘ಉತ್ತಮ ಕೆಲಸದ ತೃಪ್ತಿ’

‘ತಂಡವಾಗಿ ಕೆಲಸ’

‘ಸಂಚಾರ ಕಮಿಷನರ್‌, ಐದು ಕಮಿಷನರ್‌ಗಳು, ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡುತ್ತೇವೆ’ ಎಂದು ಮುಖ್ಯ ಪೊಲೀಸ್ ಕಮಿಷನರ್‌ ಆರ್‌.ಹಿತೇಂದ್ರ ಹೇಳಿದರು.

ಪೂರ್ವ ವಿಭಾಗದ ಪೊಲೀಸ್ ಕಮಿಷನರ್‌ (ವೈಟ್‌ಫೀಲ್ಡ್‌ ಡಿಸಿಪಿ, ಪೂರ್ವ ವಿಭಾಗದ ಡಿಸಿಪಿ, ಪೂರ್ವ ಸಂಚಾರ ವಿಭಾಗದ ಡಿಸಿಪಿ)

ವೈಟ್‌ಫೀಲ್ಡ್‌ಕಾಡುಗೋಡಿವರ್ತೂರುಎಚ್‌ಎಎಲ್‌ಮಾರತ್‌ಹಳ್ಳಿಬೆಳ್ಳಂದೂರುರಾಮಮೂರ್ತಿ ನಗರಹೆಣ್ಣೂರುಕೆ.ಆರ್‌ ಪುರಆವಲಹಳ್ಳಿಮಹದೇವಪುರ

ಉತ್ತರ ವಿಭಾಗದ ಪೊಲೀಸ್ ಕಮಿಷನರ್‌ (ಉತ್ತರ ವಿಭಾಗದ ಡಿಸಿಪಿ, ಯಶವಂತಪುರ ಡಿಸಿಪಿ, ಈಶಾನ್ಯ ಡಿಸಿಪಿ ಹಾಗೂ ಉತ್ತರ ವಿಭಾಗ ಸಂಚಾರ ವಿಭಾಗದ ಡಿಸಿಪಿ)

ಡಿ.ಜೆ ಹಳ್ಳಿಕೆ.ಜಿ ಹಳ್ಳಿಗೋವಿಂದಪುರಬಾಣಸವಾಡಿಸಂಜಯ್‌ನಗರಜೆ.ಸಿ ನಗರಆರ್‌.ಟಿ ನಗರಹೆಬ್ಬಾಳಯಶವಂತಪುರಆರ್‌ಎಂಸಿ ಯಾರ್ಡ್‌ಜಾಲಹಳ್ಳಿಸೋಲದೇವನಹಳ್ಳಿಗಂಗಮ್ಮನಗುಡಿಬಾಗಲಗುಂಟೆಚಿಕ್ಕಬಾಣಾವರರಾಜಾನುಕುಂಟೆಯಲಹಂಕಯಲಹಂಕ ನ್ಯೂಟೌನ್‌ವಿದ್ಯಾರಣ್ಯಪುರಕೊಡಿಗೇಹಳ್ಳಿಬಾಗಲೂರುಕೊತ್ತನೂರುಸಂಪಿಗೇಹಳ್ಳಿಅಮೃತಹಳ್ಳಿಚಿಕ್ಕಜಾಲದೇವನಹಳ್ಳಿಕೆಐಎಎಲ್‌

ದಕ್ಷಿಣ ವಿಭಾಗದ ಕಮಿಷನರ್‌ (ದಕ್ಷಿಣ ವಿಭಾಗದ ಡಿಸಿಪಿ, ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ, ಆಗ್ನೇಯ ವಿಭಾಗದ ಡಿಸಿ‍ಪಿ ಹಾಗೂ ದಕ್ಷಿಣ ಸಂಚಾರ ವಿಭಾಗದ ಡಿಸಿಪಿ)

ಜೆ.ಪಿ ನಗರಪುಟ್ಟೇನಹಳ್ಳಿಜಯನಗರಬನಶಂಕರಿಬಸವನಗುಡಿಕೆ.ಎಸ್‌. ಲೇಔಟ್‌ಸುಬ್ರಹ್ಮಣ್ಯ ಪುರಕೋಣನಕುಂಟೆತಲಘಟ್ಟಪುರಎಲೆಕ್ಟ್ರಾನಿಕ್ ಸಿಟಿಹೆಬ್ಬಗೋಡುಪರಪ್ಪನ ಅಗ್ರಹಾರಸೂರ್ಯನಗರಹುಳಿಮಾವುಸರ್ಜಾಪುರಜಿಗಣಿಅತ್ತಿಬೆಲೆಆನೇಕಲ್‌ಬನ್ನೇರುಘಟ್ಟಮಡಿವಾಳಕೋರಮಂಗಲಎಚ್‌ಎಸ್‌ಆರ್‌ ಲೇಔಟ್‌ಆಡುಗೋಡಿಬಂಡೇಪಾಳ್ಯಮೈಕೊಲೇಔಟ್‌ಬೊಮ್ಮೇನಹಳ್ಳಿಸುದ್ದಗುಂಟೆಪಾಳ್ಯತಿಲಕ್‌ನಗರಬೇಗೂರು

ಕೇಂದ್ರ ವಿಭಾಗದ ಕಮಿಷನರ್‌ (ಕೇಂದ್ರ ವಿಭಾಗದ ಡಿಸಿಪಿ, ಗಾಂಧಿನಗರ ಡಿಸಿಪಿ, ಇಂದಿರಾನಗರ ಡಿಸಿಪಿ, ಕೇಂದ್ರ ಸಂಚಾರ ವಿಭಾಗದ ಡಿಸಿಪಿ)

ಹಲಸೂರು ಗೇಟ್‌ಎಸ್‌.ಜೆ ಪಾರ್ಕ್‌ವೈಯಾಲಿಕಾವಲ್‌ಕಬ್ಬನ್‌ಪಾರ್ಕ್ವಿಧಾನಸೌಧವಿವೇಕನಗರಅಶೋಕನಗರಚಾಮರಾಜಪೇಟೆಸಿಟಿ ಮಾರುಕಟ್ಟೆಜೆಜೆ ನಗರಕಾಟನ್‌ಪೇಟೆಉಪ್ಪಾರಪೇಟೆವಿ.ವಿ ಪುರಶಂಕರಪುರಕಲಾಸಿಪಾಳ್ಯಸಿದ್ದಾಪುರಬ್ಯಾಡರಹಳ್ಳಿಹಲಸೂರುಇಂದಿರಾನಗರಜೆ.ಬಿ ನಗರಭಾರತಿನಗರಪುಲಕೇಶಿನಗರಕಮರ್ಷಿಯಲ್‌ ಸ್ಟ್ರೀಟ್‌ಶಿವಾಜಿನಗರ

ಪುಟ 1ಕ್ಕೆ...

ಐದು ವಿಭಾಗಕ್ಕೆ ಯಾರ್‍ಯಾರು ಕಮಿಷನರ್‌?

ಲಾಬೂರಾಮ್‌, ಕೇಂದ್ರ ವಿಭಾಗವಿಕಾಸ್‌ ಕುಮಾರ್ ವಿಕಾಸ್‌, ಪಶ್ಚಿಮ ವಿಭಾಗ ಎಂ.ಬಿ.ಬೋರಲಿಂಗಯ್ಯ, ಉತ್ತರ ವಿಭಾಗಸಿ.ವಂಶಿಕೃಷ್ಣ, ದಕ್ಷಿಣ ವಿಭಾಗ (ಹೆಚ್ಚುವರಿ ಹೊಣೆ)ಪಿ.ಎಸ್‌.ಹರ್ಷ, ಪೂರ್ವ ವಿಭಾಗ

ಒಂದು ತಂಡವಾಗಿ ಕೆಲಸ: ಆರ್.ಹಿತೇಂದ್ರ

ಬಹಳ ವರ್ಷಗಳಿಂದ ನಗರ ಪೊಲೀಸ್ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿದೆ. ಸಿಬ್ಬಂದಿ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

‘ನನಗೆ ಸಂಚಾರ ವಿಭಾಗದಲ್ಲೂ ಕೆಲಸ ಮಾಡಿದ ಅನುಭವ ಇದೆ. ಸಂಚಾರ ಸಮಸ್ಯೆಯನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ತ್ವರಿತವಾಗಿ ದಟ್ಟಣೆ ಸಮಸ್ಯೆ ಬಗೆಹರಿಸಲು ಸಂಚಾರ ವಿಭಾಗಕ್ಕೆ ಪ್ರತ್ಯೇಕ ಕಮಿಷನರ್‌ ಸಹ ನೇಮಿಸಲಾಗಿದೆ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

‘ಪ್ರಾಮಾಣಿಕತೆಯಿಂದ ಕೆಲಸ ಮಾಡುವಂತೆ ಸಿಬ್ಬಂದಿಯನ್ನು ಪ್ರೀತಿಯಿಂದ ಕೊರುತ್ತೇನೆ. ತೊಂದರೆ ಇದ್ದರೆ ತಿಳಿಸಿ. ಸಮಸ್ಯೆಗಳನ್ನು ಪರಿಹರಿಸಲಾಗುವುದು. ಯಾವ ಅಧಿಕಾರಿಯನ್ನು ಒತ್ತಾಯದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿಲ್ಲ. ಬಹುತೇಕರು ಕೋರಿಕೆ ಮೇಲೆಯೇ ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಜವಾಬ್ದಾರಿಯಿಂದ ಕೆಲಸ ಮಾಡುವುದು ಅಗತ್ಯ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬೆಂಗಳೂರಿನ ಕಾನೂನು ಸುವ್ಯವಸ್ಥೆ, ಸಂಚಾರ ವ್ಯಸ್ಥೆಯನ್ನು ಸಮರ್ಥವಾಗಿ ನಿಭಾಯಿಸುವುದು ಹಾಗೂ ನಿಯಂತ್ರಿಸುವುದರ ಜೊತೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು ಸಾರ್ವಜನಿಕರಿಗೆ ಕಾಣುವಂತಾಗಬೇಕು. ನಮ್ಮ ಕೆಲಸ ಮಾತನಾಡುವಂತೆ ಕಾರ್ಯ ನಿರ್ವಹಿಸುತ್ತೇವೆ. ನನ್ನ ಅನುಭವದ ಆಧಾರದ ಮೇಲೆ ಇಲಾಖೆಯಲ್ಲಿ ಹೊಸ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ಕಳೆದ ಮೂರು ವರ್ಷಗಳಿಂದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಅಲ್ಲದೆ, ಸಿಬಿಐನಲ್ಲಿಯೂ ಕೆಲಸ ಮಾಡಿದ ಅನುಭವವಿದೆ. ಈ ಅನುಭವವನ್ನು ಬಳಸಿಕೊಂಡು ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಹೊಸ ವ್ಯವಸ್ಥೆಗೆ ಅಗತ್ಯ ಇರುವ ಪೊಲೀಸ್ ಠಾಣೆಗಳು, ಕಚೇರಿಗಳು ಹಾಗೂ ಇತರ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಕೆಲಸಗಳೂ ನಡೆಯಲಿವೆ’ ಎಂದು ಹೇಳಿದರು.

261119-4-1843209822