ಊಟಿ: ತಮಿಳುನಾಡಿನ ಪ್ರಸಿದ್ಧ ಗಿರಿಧಾಮ ಊಟಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮುಂಜಾನೆ ಇಡೀ ಪ್ರದೇಶ ಹಿಮದ ಹೊದಿಕೆಯಿಂದ ಆವೃತವಾಗಿದೆ.
ನೀಲಗಿರಿ ಜಿಲ್ಲೆಯ ಊಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಸಾಮಾನ್ಯವಾಗಿ ನೀಲಗಿರಿ ಜಿಲ್ಲೆಯಲ್ಲಿ ಡಿಸೆಂಬರ್ 15ರ ನಂತರ ಹಿಮದ ಋತು ಆರಂಭವಾಗುತ್ತದೆ.
ಆದರೆ ಈ ಬಾರಿ ಡಿಸೆಂಬರ್ ಆರಂಭಕ್ಕೂ ಮುನ್ನವೇ ಹಿಮ ಆವರಿಸಿಕೊಂಡಿದೆ. ಇದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಮುಗೀತು, ಈ ವರ್ಷ ಚಳಿ ಹೇಗಿರಲಿದೆ; ಹವಾಮಾನ ತಜ್ಞರು ಏನಂತಾರೆ?ಹುಲ್ಲುಗಾವಲು, ವಾಹನಗಳ ಮೇಲೆ ಹಿಮದ ಹೊದಿಕೆ
ಗುರುವಾರ ಮುಂಜಾನೆ ಊಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಮದ ಪದರ ಕಾಣಿಸಿಕೊಂಡಿದೆ. ಹುಲ್ಲುಗಾವಲುಗಳು, ವಾಹನಗಳು, ಮರಗಳು ಹಾಗೂ ಗಿಡಗಳ ಮೇಲೆ ಬಿಳಿ ಹಿಮದ ಹೊದಿಕೆ ಆವರಿಸಿತ್ತು. ಮುಂಜಾನೆಯ ಈ ದೃಶ್ಯ ಗಿರಿಧಾಮದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.
ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ಗೆ ಇಳಿದಿರುವುದರಿಂದ ಬೆಳಗಿನ ಜಾವ ಚಳಿ ತೀವ್ರವಾಗಿತ್ತು. ಸಾಮಾನ್ಯಕ್ಕಿಂತ ಮುಂಚಿತವಾಗಿ ಹಿಮದ ಋತು ಆರಂಭವಾಗಿರುವುದು ಈ ಬಾರಿಯ ನೀಲಗಿರಿಯ ವಿಶೇಷವಾಗಿದೆ.
#WATCH | Ooty, Tamil Nadu: Frost blanketed Ooty and nearby areas in the Nilgiris district early this morning; the minimum temperature dropped to 5.9 degrees Celsius. The frost season in the Nilgiris usually begins after December 15, but it has arrived early this year. Grasslands, vehicles, trees, and plants were covered in frost.
— ANI (@ANI) November 18, 2026

